ಪಡುಬಿದ್ರಿ: ಲಾರಿ ಢಿಕ್ಕಿಯಾಗಿ ಸ್ಕೂಟರ್ ಸವಾರ ಸಾವು

Update: 2022-02-20 22:28 IST
ಪಡುಬಿದ್ರಿ: ಲಾರಿ ಢಿಕ್ಕಿಯಾಗಿ ಸ್ಕೂಟರ್ ಸವಾರ ಸಾವು
  • whatsapp icon

ಪಡುಬಿದ್ರಿ: ಹೆಜಮಾಡಿ ಚೆಕ್‍ಪೋಸ್ಟ್ ಬಳಿ ಸ್ಕೂಟರ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಸ್ಕೂಟರ್ ಸವಾರ ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪ್ಪಿದ ಘಟನೆ ನಡೆದಿದೆ.

ದೀನ್‍ಸ್ಟ್ರೀಟ್ ನಿವಾಸಿ ಮುಹಿದ್ದೀನ್ ಯೂಸುಫ್ (17) ಮೃತಪಟ್ಟ ಯುವಕ. 

ಶನಿವಾರ ಸ್ಕೂಟರ್ ಸವಾರ ಮೂಲ್ಕಿಗೆ ಸಂಚರಿಸುತಿದ್ದ ವೇಳೆ ಮಂಗಳೂರು ಕಡೆಗೆ ಸಂಚರಿಸುತಿದ್ದ ಲಾರಿ ಹೆಜಮಾಡಿ ಚೆಕ್‍ಪೋಸ್ಟ್ ಬಳಿ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ತೀವ್ರವಾಗಿ ಗಾಯಗೊಂಡ ಯೂಸುಫ್‍ನನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ರವಿವಾರ ಸಂಜೆ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News