ಡಿಜಿಟಲ್ ಸಾಕ್ಷರತೆ ಇಂದಿನ ಅಗತತ್ಯೆ: ರಮೇಶ್ ಪೈ

Update: 2022-02-21 18:47 IST
ಡಿಜಿಟಲ್ ಸಾಕ್ಷರತೆ ಇಂದಿನ ಅಗತತ್ಯೆ: ರಮೇಶ್ ಪೈ
  • whatsapp icon

ಬ್ರಹ್ಮಾವರ, ಫೆ.21: ಇಂದಿನ ಆಧುನಿಕ ಯುಗದಲ್ಲಿ ಭಾರತ ಡಿಜಿಟಲ್ ಇಂಡಿಯ ಆಗುತ್ತಿರುವ ಸಮಯದಲ್ಲಿ ನಾವು ಡಿಜಿಟಲ್ ಸಾಕ್ಷರರಾಗಬೇಕಾದ ಅಗತ್ಯವಿದೆ. ಜೊತೆಗೆ ಡಿಜಿಟಲ್ ವ್ಯವಸ್ಥೆಯಲ್ಲಿ ನಡೆಯುವ ಮೋಸಗಳ ಬಗ್ಗೆ ಸಹ ನಾವು ಜಾಗೃತರಾಗಿರಬೇಕು ಎಂದು ಉಡುಪಿ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ವಿಭಾಗೀಯ ಪ್ರಬಂಧಕ ರಮೇಶ್ ಪೈ ಅಭಿಪ್ರಾಯಪಟ್ಟಿದ್ದಾರೆ.

ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆ, ಕೆನರಾ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಛೇರಿ ಹಾಗೂ ಭಾರತೀಯ ರಿಸರ್ವ ಬ್ಯಾಂಕ್ ಬೆಂಗಳೂರು ಇದರ ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ಸಹಯೋಗದೊಂದಿಗೆ ಏರ್ಪಡಿಸಿದ ಆರ್ಥಿಕ ಸಾಕ್ಷರತಾ ಸಪ್ತಾಹದ ಪ್ರಯುಕ್ತ ಹಮ್ಮಿಕೊಂಡ ಡಿಜಿಟಲ್ ಬಳಸಿ, ಸುರಕ್ಷತೆಯೊಂದಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ದೈನಂದಿನ ಬ್ಯಾಂಕಿಂಗ್ ವ್ಯವಹಾರದಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಯಾವ ರೀತಿಯಲ್ಲಿ ಬಳಸಬೇಕು, ಅದರ ಉಪಯೋಗಗಳೇನು ಎಂಬ ಬಗ್ಗೆ ರಮೇಶ್ ಪೈ ವಿವರವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ ಭಾಗವಹಿಸಿ ಮಾತನಾಡಿ ಇಂದಿನ ವ್ಯವಹಾರಗಳಿಗೆ ಡಿಜಿಟಲ್ ಮಾಧ್ಯಮ ಬಹಳ ಪ್ರಯೋಜನಕಾರಿ ಆಗಿದೆ ಎಂದರು. ಆನ್‌ಲೈನ್ ಮೂಲಕ ಆರ್‌ಬಿಐನ ಸಹಾಯ ಮಹಾ ಪ್ರಬಂಧಕ ಜಿ.ವೆಂಕಟೇಶ ಡಿಜಿಟಲ್ ಬ್ಯಾಂಕಿಂಗ್ ಮತ್ತು ಆರ್ಥಿಕ ಸಾಕ್ಷರತೆ ಮಹತ್ವದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಲೀಡ್ ಡಿಸ್ಟ್ರಿಕ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ. ಪಿಂಜಾರ್ ಸ್ವಾಗತಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಪಾಪ ನಾಯ್ಕೆ ವಂದಿಸಿದರು. ರುಡ್‌ಸೆಟ್‌ನ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕೆನರಾ ಬ್ಯಾಂಕ್ ಆರ್‌ಸೆಟಿ ನಿರ್ದೇಶಕಿ ಸವಿತಾ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲೀಡ್ ಡಿಸ್ಟ್ರಿಕ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ. ಪಿಂಜಾರ್ ಸ್ವಾಗತಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಪಾಪ ನಾಯ್ಕೆ ವಂದಿಸಿದರು. ರುಡ್‌ಸೆಟ್‌ನ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕೆನರಾ ಬ್ಯಾಂಕ್ ಆರ್‌ಸೆಟಿ ನಿರ್ದೇಶಕಿ ಸವಿತಾ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರುಡ್‌ಸೆಟ್ ಆಸರೆ ಸಂಘಟನೆಯ ಸದ್ಯಸರು ಸೇರಿ ಸುಮಾರು 40 ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News