ಕೊರಗರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆ: ಡಾ.ಸಬಿತಾ ಕೊರಗ ಗುಂಡ್ಮಿ

Update: 2022-02-27 22:19 IST
ಕೊರಗರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆ: ಡಾ.ಸಬಿತಾ ಕೊರಗ ಗುಂಡ್ಮಿ
  • whatsapp icon

ಉಡುಪಿ, ಫೆ.27: 1991ರ ಜನಗಣತಿಯಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿ 17000 ಇದ್ದ ಕೊರಗರ ಜನಸಂಖ್ಯೆ 2011ರಲ್ಲಿ 11ಸಾವಿರಕ್ಕೆ ಇಳಿಕೆ ಯಾಗಿದೆ. ಹೆಚ್ಚಿನವರು 50ವರ್ಷ ವಯಸ್ಸಿಗೆ ಮೃತಪಡುತ್ತಿರುವು ದರಿಂದ ಕಳೆದ 10ವರ್ಷಗಳಲ್ಲಿ ಕೊರಗರ ಜನಸಂಖ್ಯೆ ಇನ್ನಷ್ಟು ಇಳಿಕೆಯಾಗಿರುವ ಸಾಧ್ಯತೆ ಇದೆ. ಆದುದರಿಂದ ಸಮುದಾಯದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಮಂಗಳೂರು ವಿವಿಯ ಸಹಾಯಕ ಪ್ರಾಧ್ಯಾಪಕಿ ಹಾಗೂ ಕೊರಗ ಸಮುದಾಯದ ಮೊದಲ ಮಹಿಳಾ ಪಿಎಚ್‌ಡಿ ಪದವೀಧರೆ ಡಾ.ಸಬಿತಾ ಕೊರಗ ಗುಂಡ್ಮಿ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲಾ ಕೊರಗ ಸಂಘಟನೆ, ಸಮಗ್ರ ಬುಡ ಕಟ್ಟು ಅಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ನಡೆದ ಎರಡು ದಿನಗಳ ಜಿಲ್ಲಾ ಮಟ್ಟದ ಕೊರಗರ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಕೊರಗರಿಗೆ ದೇವಸ್ಥಾನ ಹಾಗೂ ಮನೆಯೊಳಗೆ ಪ್ರವೇಶ ನಿರಾಕರಣೆ, ಅಜಲು ಪದ್ಧತಿಯಂತಹ ನಮ್ಮ ಹಿರಿಯರು ಮಾಡಿದ ತಪ್ಪುಗಳನ್ನು ದೂಷಿಸುವ ಬದಲು ಸರಿಪಡಿಸಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಮೂಲಕ ಮಾತ್ರವೇ ಸಮುದಾಯದ ಅಭಿವೃದ್ಧಿ ಸಾಧ್ಯವೇ ಹೊರತು ಯಾವುದೇ ನಾಯಕರಿಂದ ಅಸಾಧ್ಯ. ಆದುದ ರಿಂದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು.

ಕೊರಗ ಸಮುದಾಯದ ಮಕ್ಕಳು ಇಂದು ಉನ್ನತ ಶಿಕ್ಷಣ ಮಾಡುತ್ತಿದ್ದರೂ ಉದ್ಯೋಗ ಸಿಗದೆ ತೊಂದರೆಗೆ ಒಳಗಾಗುತ್ತಿದ್ದಾರೆ. ಆದುದರಿಂದ ಉದ್ಯೋಗದ ದೃಷ್ಠಿಯಿಂದ ಪರಿಶಿಷ್ಟ ಪಂಗಡದಲ್ಲಿರುವ ಕೊರಗ ಸಮುದಾಯದ್ಕೆ ಒಳ ಮೀಸಲಾತಿ ಅತಿ ಅಗತ್ಯವಾಗಿದೆ. ಉದ್ಯೋಗ ಸಿಕ್ಕಿಲ್ಲ ಎಂಬ ಕಾರಣಕ್ಕೆ ಶಿಕ್ಷಣ ತೊರೆಯುವ ಕೆಲಸ ಕೂಡ ಸಮುದಾಯ ಮಾಡಬಾರದು. ಯಾವುದೇ ಸಮು ದಾಯ ಮುಂದೆ ಬರಲು ರಾಜಕೀಯ ಅಸ್ತಿತ್ವ ಕೂಡ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಮುಖ್ಯಕಾರ್ಯನಿರ್ವ ಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸ ಲಾಯಿತು. ಉಡುಪಿ ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯ ಯೋಜನಾ ಸಮನ್ವ ಯಾಧಿಕಾರಿ ದೂದ್‌ಪೀರ್ ಪಿ., ಕೊರಗ ಮುಖಂಡರಾದ ಬೊಗ್ರ ಕೊರಗ, ರವಿ ಅಲೆವೂರು, ಲೇಖಕ ಬಾಬು ಪಾಂಗಾಳ ಮೊಲಾದವರು ಉಪಸ್ಥಿತರಿದ್ದರು.

ಕೊರಗ ಸಮುದಾಯದ ಮುಖಂಡ ಗಣೇಶ್ ಕುಂದಾಪುರ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ವಂದಿಸಿದರು. ಅಶ್ವಿನಿ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.

ಕೊರಗರಿಗೆ ವಿಶೇಷ ಮೀಸಲಾತಿ ಅಗತ್ಯ

ಇತರ ಬುಡಕಟ್ಟು ಸಮುದಾಯಗಳಿಗೆ ಹೋಲಿಸಿದರೆ ಸಿದ್ಧಿ ಮತ್ತು ಕೊರಗ ಸಮುದಾಯವು ಶಿಕ್ಷಣದಲ್ಲಿ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಕೊರಗ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆದರೂ ಉದ್ಯೋಗ ಸಂದರ್ಭದಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಡಾ.ಸಬಿತಾ ಕೊರಗ ಗುಂಡ್ಮಿ ತಿಳಿಸಿದರು.

ಪರಿಶಿಷ್ಟ ಪಂಗಡಕ್ಕೆ ಕೇವಲ ಶೇ.3ರಷ್ಟು ಮೀಸಲಾತಿ ಇದ್ದು, ಅದರಲ್ಲಿ ಕರಾವಳಿಯ ಮೂರು ಸಮುದಾಯ ಸೇರಿದಂತೆ ರಾಜ್ಯದ 50 ಸಮುದಾಯ ಗಳು ಭಾಗವಹಿಸಬೇಕಾಗುತ್ತದೆ. ಈ ಸಮುದಾಯದೊಂದಿಗೆ ಕೊರಗ ವಿದ್ಯಾರ್ಥಿಗಳು ಸ್ಪರ್ಧೆ ಮಾಡುವುದು ಕಷ್ಟಸಾಧ್ಯವಾಗಿದೆ. ಆದುದರಿಂದ ಸರಕಾರವು ಮೀಸಲಾತಿಯಲ್ಲಿ ಕೊರಗ ಸಮುದಾಯವನ್ನು ವಿಶೇಷವಾಗಿ ಪರಿ ಗಣಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News