ಹೊಸದಿಲ್ಲಿ ತಲುಪಿದ ಉಡುಪಿ ಜಿಲ್ಲೆಯ ರೋಹನ್ ಧನಂಜಯ್
Update: 2022-03-04 08:21 GMT
ಉಡುಪಿ : ಯುದ್ಧ ಪೀಡಿತ ಉಕ್ರೇನ್‌ನ ಖಾರ್ಕೀವ್ ನೇಶನಲ್ ಮೆಡಿಕಲ್ ಯುನಿವರ್ಸಿಟಿಯ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿ ರೋಹನ್ ಧನಂಜಯ್ ಅವರು ಇಂದು ಅಪರಾಹ್ನ ಭಾರತ ಸರಕಾರ ವ್ಯವಸ್ಥೆಗೊಳಿಸಿದ ವಿಮಾನದಲ್ಲಿ ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಉಕ್ರೇನ್‌ನಿಂದ ಬುಧವಾರ ಪೊಲೆಂಡ್‌ಗೆ ಆಗಮಿಸಿದ್ದ ಅವರು ನಿನ್ನೆ ಮಧ್ಯರಾತ್ರಿ 1:00 ಗಂಟೆಗೆ ಅಲ್ಲಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಇಂದು ಸಂಜೆ ರಾಜ್ಯ ಸರಕಾರ ವ್ಯವಸ್ಥೆಗೊಳಿಸಿದ ವಿಮಾನದಲ್ಲಿ ರಾತ್ರಿ 9:30ಕ್ಕೆ ಅವರು ಬೆಂಗಳೂರು ತಲುಪಲಿದ್ದಾರೆ ಎಂದು ರೋಹನ್ ತಂದೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ. ಧನಂಜಯ್ ತಿಳಿಸಿದ್ದಾರೆ.