ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ: ಮೂವರು ಆರೋಪಿಗಳ ಬಂಧನ
Update: 2022-03-10 15:50 GMT
ಬೆಂಗಳೂರು, ಮಾ.10: ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬ್ಯಾಟರಾಯನಪುರದ ಸಿ.ಆರ್.ಮಧು(43), ಅಸ್ಸಾಂ ಮೂಲದ ರಫಿಕುಲ್(21) ಹಾಗೂ ಪಶ್ಚಿಮ ಬಂಗಾಳದ ರುಬೇಲ್ ಮಂಡಲ್(28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಆರೋಪಿ ಮಧು, ವಿದ್ಯಾರಣ್ಯಪುರದ ಜಯಕೃಷ್ಣ ಬಡಾವಣೆಯ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಆರೋಪಿಗಳಾದ ರಫಿಕುಲ್ ಮತ್ತು ರುಬೇಲ್ ಮಂಡಲ್, ಈಶಾನ್ಯ ರಾಜ್ಯದ ಯುವತಿಯರನ್ನು ಕರೆತಂದು ಮಧು ಜೊತೆ ದಂಧೆಯಲ್ಲಿ ಕೈ ಜೋಡಿಸಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಆರೋಪಿಗಳ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.