ಉಡುಪಿ: ಹೊರಜಿಲ್ಲೆಯ ಒಬ್ಬರಲ್ಲಿ ಕೋವಿಡ್‌ ಪಾಸಿಟಿವ್ ಪತ್ತೆ

Update: 2022-03-15 21:33 IST
  • whatsapp icon

ಉಡುಪಿ : ಮಂಗಳವಾರ ಸಹ ಜಿಲ್ಲೆಯ ಯಾರಲ್ಲೂ ಕೋವಿಡ್- 19 ಸೋಂಕು ಪತ್ತೆಯಾಗದಿದ್ದರೂ, ಚಿಕಿತ್ಸೆಗೆಂದು ಬಂದ ಹೊರ ಜಿಲ್ಲೆಯ ಒಬ್ಬರು ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲೀಗ ಇರುವ  ಸಕ್ರೀಯ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ.

ಮಂಗಳವಾರ ಜಿಲ್ಲೆಯ 509 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಯಾರೂ ಸೋಂಕಿಗೆ ಪಾಸಿಟಿವ್ ಬಂದಿಲ್ಲ. ಉಡುಪಿ ತಾಲೂಕಿನಲ್ಲಿ 377 ಮಂದಿ, ಕುಂದಾಪುರ ತಾಲೂಕಿನಲ್ಲಿ 79 ಹಾಗೂ ಕಾರ್ಕಳ ತಾಲೂಕಿನಲ್ಲಿ 53 ಮಂದಿ ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದಾರೆ.

ದಿನದಲ್ಲಿ ಯಾರೂ ಸೋಂಕಿನಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಸದ್ಯ ಚಿಕಿತ್ಸೆ ಯಲ್ಲಿರುವವರ ಸಂಖ್ಯೆ ೩ ಆಗಿದೆ. ಜ.1ರ ನಂತರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ 18422 ಆದರೆ, ಚೇತರಿಸಿಕೊಂಡವರ ಸಂಖ್ಯೆ 18486 ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.

4110 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 4100 ಮಂದಿ  ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. 60ವರ್ಷ ಮೇಲಿನ 275 ಹಿರಿಯ ನಾಗರಿಕರು ಸೇರಿದಂತೆ 268 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ  ಪಡೆದರೆ, 40 ಮಂದಿ ಮೊದಲ ಡೋಸ್ ಹಾಗೂ 3772 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News