ಓ ಮೆಣಸೇ ...

Update: 2022-04-03 19:30 GMT

ಬಿಜೆಪಿ ನಾಯಕರ ಷಡ್ಯಂತ್ರದಿಂದ ನನಗೆ ಸಚಿವ ಸ್ಥಾನ ತಪ್ಪಿತು -ಎಚ್.ವಿಶ್ವನಾಥ್, ವಿ.ಪ. ಸದಸ್ಯ
ನಿಮ್ಮ ಷಡ್ಯಂತ್ರದಿಂದ ಆದ ಅನಾಹುತ ಒಂದೇ, ಎರಡೇ?



ಮಾಜಿ ಸಿಎಂ ಸಿದ್ದರಾಮಯ್ಯ ಸಾಧು, ಸಂತರಲ್ಲೂ ಒಡಕು ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ -ಕೆ.ಎಸ್.ಈಶ್ವರಪ್ಪ, ಸಚಿವ
ಒಡಕು ಮೂಡಿಸುವುದು ಕೇವಲ ಬಿಜೆಪಿಯ ಹಕ್ಕು ಎಂದು ಭಾವಿಸಿದ್ದೀರಾ?



ನಾನು ಪ್ರಾಣವನ್ನಾದರೂ ಬಿಡುವೆ, ಕ್ರಿಮಿನಲ್‌ಗಳನ್ನು ಕ್ಷಮಿಸುವುದಿಲ್ಲ -ಇಮ್ರಾನ್ ಖಾನ್, ಪಾಕ್ ಪ್ರಧಾನಿ
ಅಧಿಕಾರ ಬಿಡುವುದಿಲ್ಲ ಎಂದರೆ ಇನ್ನಷ್ಟು ಚೆನ್ನಾಗಿತ್ತು.


2023ರ ಚುನಾವಣೆಯಲ್ಲಿ ಸಿದ್ದರಾಮಯ್ಯರ ಆಟ ಮುಸ್ಲಿಮ್ ಸಮುದಾಯದ ಮುಂದೆ ನಡೆಯೋದಿಲ್ಲ -ಕುಮಾರಸ್ವಾಮಿ, ಮಾಜಿ ಸಿಎಂ
ಸಿ.ಎಂ.ಇಬ್ರಾಹೀಮರ ಆಟದ ಬಗ್ಗೆ ನಿಮಗೆ ಅಷ್ಟು ವಿಶ್ವಾಸವೇ?


ಇನ್ನು ಮುಂದೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಶುರು -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ದ್ವೇಷ ಅಭಿವೃದ್ಧಿಯ ಪರ್ವ ಎಂದು ಸ್ಪಷ್ಟವಾಗಿ ಹೇಳಿ.


ರಾಷ್ಟ್ರಪತಿಯಾಗುವಂತೆ ಬಿಜೆಪಿ ಅಥವಾ ಯಾವುದೇ ಪಕ್ಷದಿಂದ ನನಗೆ ಆಹ್ವಾನ ಬಂದರೆ ಅದನ್ನು ನಾನು ಒಪ್ಪಿಕೊಳ್ಳುವುದಿಲ್ಲ -ಮಾಯಾವತಿ, ಬಿಎಸ್ಪಿ ವರಿಷ್ಠೆ
ಯಾವುದೇ ಪಕ್ಷದಿಂದ ಆಹ್ವಾನ ಬರುವುದಿಲ್ಲ ಎನ್ನುವುದು ಖಚಿತವಾಗಿರಬೇಕು.


ಕಟುಕನಾಗಿರುವ ವ್ಲಾದಿಮಿರ್ ಪುಟಿನ್ ಇನ್ನು ಅಧಿಕಾರದಲ್ಲಿ ಇರಬಾರದು -ಜೋ ಬೈಡನ್, ಅಮೆರಿಕ ಅಧ್ಯಕ್ಷ
ಕಟುಕರು ಅಧಿಕಾರದಲ್ಲಿ ಇರಬಾರದು ಎನ್ನುವ ನಿಯಮ ಇದೆ ಎಂದಾದರೆ, ಅಮೆರಿಕ ಎನ್ನುವುದೇ ಇರುತ್ತಿರಲಿಲ್ಲ.


ಚುನಾವಣೆಗಳು ಜನಾದೇಶವಾಗುವ ಬದಲು ಧನಾದೇಶಗಳಾಗುತ್ತಿವೆ -ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ
ಸದ್ಯಕ್ಕೆ ಅಸ್ತಿತ್ವದಲ್ಲಿರುವ ಸರಕಾರ ಧನಾದೇಶದಿಂದ ರಚನೆಯಾಗಿದ್ದಲ್ಲವೇ?



ಕಾಂಗ್ರೆಸ್‌ನ ಕೊಡುಗೆ ಮತ್ತು ಬಿಜೆಪಿಯ ವೈಫಲ್ಯವನ್ನು ಮತಗಟ್ಟೆಯ ಕೊನೆಯ ವ್ಯಕ್ತಿಯವರೆಗೆ ತಲುಪಿಸಲು ಶಕ್ತಿಮೀರಿ ಶ್ರಮಿಸುತ್ತೇನೆ -ಎಂ.ಬಿ.ಪಾಟೀಲ್, ಕೆಪಿಸಿಸಿ ಪ್ರ.ಸ. ಅಧ್ಯಕ್ಷ
ಮೊದಲಿನ ವ್ಯಕ್ತಿಗೆ ತಲುಪಿಸುವವರು ಯಾರು?


ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು -ಆರ್.ಅಶೋಕ್, ಸಚಿವ
ನೀವು ಜಮ್ಮು -ಕಾಶ್ಮೀರ, ಈಶಾನ್ಯ ರಾಜ್ಯಗಳ ಸಚಿವರೋ? ಅಥವಾ ಕರ್ನಾಟಕ ರಾಜ್ಯದ ಸಚಿವರೋ?


ಯುಪಿಎ ಸರಕಾರದ ಅವಧಿಯಲ್ಲಿ ಸುಸ್ತಿ ಸಾಲಗಾರರಿಂದ ಸಾಲ ಮರುವಸೂಲಿ ಆಗುತ್ತಿರಲಿಲ್ಲ -ನಿರ್ಮಲಾ ಸೀತಾರಾಮನ್, ಸಚಿವೆ
ಈಗ ಸಾಲಗಾರರ ಬದಲಿಗೆ, ಸಾಮಾನ್ಯ ಪ್ರಜೆಗಳಿಂದ ವಸೂಲಿ ಮಾಡಲಾಗುತ್ತಿದೆ.


ಯುದ್ಧದಲ್ಲಿ ಲಕ್ಷ್ಮಣನಿಗೆ ಬಾಣ ಚುಚ್ಚಿ ಪ್ರಾಣ ಹೋಗುತ್ತಿದ್ದ ಸಂದರ್ಭದಲ್ಲಿ ಯಾವುದೇ ಇಂಜೆಕ್ಷನ್ ಅಥವಾ ಡೋಲೋ ಇರಲಿಲ್ಲ. ಆಯುರ್ವೇದ ಅವನ ಪ್ರಾಣ ಉಳಿಸಿತ್ತು -ಯು.ಬಿ.ವೆಂಕಟೇಶ್, ವಿ.ಪ. ಸದಸ್ಯ
ಯಾರಿಗೆ ಗೊತ್ತು? ರಾಮಾಯಣ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿ ಇತ್ತು ಎಂದ ಮೇಲೆ, ಡೋಲೋ ಇರದೇ ಇರುತ್ತದೆಯೇ?


ಗ್ರಾಮೀಣ ಪ್ರದೇಶದಲ್ಲಿ ಅಸ್ಪಶ್ಯತೆ ನಿವಾರಣೆಗೆ 'ವಿನಯ ಸಾಮರಸ್ಯ' ಜನಾಂದೋಲನ ನಡೆಸಲು ಸರಕಾರ ಮುಂದಾಗಿದೆ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ವಿನಯಪೂರ್ವಕವಾಗಿ ಜಾತಿಯನ್ನು ಹೇರಿ ಸಾಮರಸ್ಯ ಬೆಳೆಸುವುದಕ್ಕೆ ಇರಬೇಕು.


ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕವಾಗಿದೆ -ಕುಮಾರಸ್ವಾಮಿ, ಮಾಜಿ ಸಿಎಂ
ಬಹುಷಃ ಎರಡು ಪುಸ್ತಕ ಇಟ್ಟು ಕೊಂಡಿರಬೇಕು. ಒಂದು ತೆರೆದು ತೋರಿಸುವುದಕ್ಕೆ. ಇನ್ನೊಂದು ರಹಸ್ಯವಾಗಿ ಮುಚ್ಚಿಡುವುದಕ್ಕೆ.


ದೇಶದ ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಪಕ್ಷದ ಅಗತ್ಯವಿದೆ -ನಿತಿನ್ ಗಡ್ಕರಿ, ಕೇಂದ್ರ ಸಚಿವ
ಕಾಂಗ್ರೆಸ್‌ಗೂ ಇವಿಎಂ ತಿರುಚುವ ತಂತ್ರ ಕಲಿಸಿ ಕೊಡಿ.


ಬಿಜೆಪಿ ಸರಕಾರವನ್ನು ಜನರ ಮೂಲಕವೇ ಓಡಿಸಬೇಕು -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಆದರೆ ಜನರು ಕಾಂಗ್ರೆಸನ್ನೇ ಪದೇ ಪದೇ ಓಡಿಸುತ್ತಿದ್ದಾರಲ್ಲ?


ಗಾಂಧಿ ಕುಟುಂಬಕ್ಕೂ ಮಠ ಹಾಗೂ ಎಲ್ಲ ಧರ್ಮಗಳಿಗೂ ಇರುವ ಸಂಬಂಧ ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧದಂತೆ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಅದನ್ನು ಮತದಾರನಿಗೂ ಚುನಾವಣೆಗೂ ಇರುವ ಸಂಬಂಧವಾಗಿ ಬದಲಿಸಿಕೊಳ್ಳಿ


ಸಿಎಂ ಬಸವರಾಜ ಬೊಮ್ಮಾಯಿ ಕೆಲ ಸಂಘಟನೆಗಳ ಕೈಗೊಂಬೆಯಾಗಿದ್ದಾರೆ -ಕುಮಾರಸ್ವಾಮಿ, ಮಾಜಿ ಸಿಎಂ
ಕೈ ಗೊಂಬೆಯಾಗಿರುತ್ತಾರೆ ಎನ್ನುವ ಭವರಸೆಯಿಂದಲೇ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ.


ಸಮಾಜದಲ್ಲಿ ನೋವು ಅನುಭವಿಸಿ ಬದುಕುತ್ತಿರುವವರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು -ಗೋವಿಂದ ಕಾರಜೋಳ, ಸಚಿವ
ಮೊದಲು ನೋವಿಗೆ ನೂಕಿ, ಬಳಿಕ ಮೇಲೆತ್ತಲು ಪ್ರಯತ್ನ.


ಕೇಂದ್ರದಲ್ಲಿ ಬಿಜೆಪಿ ಸರಕಾರವಿರಲಿ, ರಾಜ್ಯಗಳಲ್ಲಿ ಬಿಜೆಪಿ ಸರಕಾರವಿರಲಿ ಪಕ್ಷವು 'ಸಬ್ಕಾ ಸಾಥ್ ಸಬ್ಕಾ ವಿಕಾಸ್' ಮಂತ್ರದೊಂದಿಗೆ ಬಡವರ ಪರವಾಗಿ ನಡೆದುಕೊಳ್ಳುತ್ತದೆ -ನರೇಂದ್ರ ಮೋದಿ, ಪ್ರಧಾನಿ
ಬರಿಯ ವೈದಿಕರ ಮಂತ್ರ ಕೇಳುತ್ತಿದೆ ಮತ್ತು ಅವರ ವಿಕಾಸ ಮಾತ್ರ ನಡೆಯುತ್ತಿದೆ.


ಭಾರತದ ಪ್ರಜಾಪ್ರಭುತ್ವವನ್ನು ಪ್ರಬಲರು ತಮ್ಮ ಕಪಿ ಮುಷ್ಟಿಗೆ ತೆಗೆದುಕೊಳ್ಳುತ್ತಿದ್ದಾರೆ -ಕೃಷ್ಣ ಭೈರೇಗೌಡ, ಶಾಸಕ
ನೀವು ಪ್ರಬಲರಾಗಿದ್ದಾಗ ಹಣ್ಣು ಹಾಕಿ ಬೆಳೆಸಿದ ಕಪಿಗಳು ಅವು.


ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ -ಬಿ.ಸಿ.ಪಾಟೀಲ್, ಸಚಿವ

ಜನರ ಕೈಯಲ್ಲಿ ವಿಷ, ಹಗ್ಗ ಕೊಳ್ಳುವುದಕ್ಕೂ ಹಣವಿಲ್ಲವಂತೆ.


ಗಂಡಸುತನ ಬೇಕಿರುವುದು ಸರಕಾರ ನಡೆಸುವುದಕ್ಕಲ್ಲ, ಅದು ಎಲ್ಲಿಗೆ ಬೇಕೆಂದು ಎಲ್ಲರಿಗೂ ಗೊತ್ತಿದೆ -ಬಿ.ಸಿ.ನಾಗೇಶ್, ಸಚಿವ

ಹೌದು, ಅದು ಈಗಾಗಲೇ ಸೀಡಿಗಳಲ್ಲಿ ದಾಖಲಾಗಿದೆ.


ಜೆಡಿಎಸ್ ನನ್ನ ಮನೆ. ಇಲ್ಲಿ ಬಾಗಿಲು, ಕಿಟಕಿ, ಅಡುಗೆ ಮನೆ ಎಲ್ಲಿದೆ ಎಂದು ನನಗೆ ಗೊತ್ತು -ಸಿ.ಎಂ.ಇಬ್ರಾಹೀಂ, ಮಾಜಿ ಸಚಿವ
ಒಂದು ಕಾಲದಲ್ಲಿ ಅದೇ ಬಾಗಿಲಿನಿಂದ ತಾನೇ ನಿಮ್ಮನ್ನು ಹೊರದಬ್ಬಿದ್ದು.



ಇತ್ತೀಚಿನ ಉ.ಪ್ರ. ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ಎಸ್ಪಿಗೆ ಮತ ಹಾಕಿ ಭಾರೀ ದೊಡ್ಡ ತಪ್ಪುಮಾಡಿದ್ದಾರೆ -ಮಾಯಾವತಿ, ಬಿಎಸ್ಪಿ ನಾಯಕಿ
ಬಿಜೆಪಿಗೆ ಹಾಕಿದ್ದರೆ ನಿಮಗೆ ಸರಿ ಕಾಣುತ್ತಿತ್ತೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!