ವೈವಿಧ್ಯತೆಯಲ್ಲಿ ಏಕತೆ ಭಾರತದ ಶಕ್ತಿ: ಅಮಿತ್ ಶಾ ಹಿಂದಿ ಕುರಿತ ಹೇಳಿಕೆಗೆ ತೆಲಂಗಾಣ ಸಚಿವ ರಾಮರಾವ್ ತಿರುಗೇಟು

Update: 2022-04-10 11:22 IST
ವೈವಿಧ್ಯತೆಯಲ್ಲಿ ಏಕತೆ ಭಾರತದ ಶಕ್ತಿ: ಅಮಿತ್ ಶಾ ಹಿಂದಿ  ಕುರಿತ ಹೇಳಿಕೆಗೆ  ತೆಲಂಗಾಣ ಸಚಿವ ರಾಮರಾವ್ ತಿರುಗೇಟು
  • whatsapp icon

ಹೈದರಾಬಾದ್: ವೈವಿಧ್ಯತೆಯಲ್ಲಿ ಏಕತೆ ಭಾರತದ ಶಕ್ತಿಯಾಗಿದ್ದು, ಭಾಷಾಂಧಭಕ್ತಿಯ   ಯಾವುದೇ ಪ್ರಯತ್ನ  ತಿರುಗುಬಾಣ ಆಗಲಿದೆ ಎಂದು ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಹೇಳಿದ್ದಾರೆ,

" ಪ್ರಿಯ  ಅಮಿತ್ ಶಾ ಜೀ, ವಿವಿಧತೆಯಲ್ಲಿ ಏಕತೆ ನಮ್ಮ ಶಕ್ತಿ. ಭಾರತವು ರಾಜ್ಯಗಳ ಒಕ್ಕೂಟ ಮತ್ತು ನಿಜವಾದ 'ವಸುಧೈಕ ಕುಟುಂಬ'. ನಮ್ಮ ಮಹಾನ್ ರಾಷ್ಟ್ರದ ಜನರು ಏನು ತಿನ್ನಬೇಕು, ಏನು ಧರಿಸಬೇಕು, ಯಾರನ್ನು ಪ್ರಾರ್ಥಿಸಬೇಕು ಹಾಗೂ  ಯಾವ ಭಾಷೆಯಲ್ಲಿ ಮಾತನಾಡಬೇಕು ಎಂಬುದನ್ನು ನಿರ್ಧರಿಸಲು ನಾವು ಏಕೆ ಬಿಡಬಾರದು! ಭಾಷಾಂಧಭಕ್ತಿ ತಿರುಗುಬಾಣ ಆಗಲಿದೆ" ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರ ರಾಮ ರಾವ್ ಹೇಳಿದ್ದಾರೆ.

ನಾನು ಮೊದಲು ಭಾರತೀಯ, ಹೆಮ್ಮೆಯ ತೆಲುಗು ಮತ್ತು ತೆಲಂಗಾಣ. ನನ್ನ ಮಾತೃಭಾಷೆ ತೆಲುಗು. ಇಂಗ್ಲಿಷ್, ಹಿಂದಿ ಹಾಗೂ  ಸ್ವಲ್ಪ ಉರ್ದು ಭಾಷೆಯಲ್ಲಿಯೂ ಮಾತನಾಡಬಲ್ಲೆ. ಹಿಂದಿ ಮತ್ತು ಇಂಗ್ಲಿಷ್ ಅನ್ನು ಹೇರುವುದು ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಈ ರಾಷ್ಟ್ರದ ಯುವಕರಿಗೆ ದೊಡ್ಡ ಅಪಚಾರವಾಗುತ್ತದೆ ”ಎಂದು ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ರಾವ್ ಹೇಳಿದರು.

ಸಂಸದೀಯ ಅಧಿಕೃತ ಭಾಷಾ ಸಮಿತಿಯ ಸಭೆಯಲ್ಲಿ ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುವ ಕ್ರಮಗಳ ಪರವಾಗಿ ಗೃಹ  ಸಚಿವ ಅಮಿತ್ ಶಾ  ಬ್ಯಾಟಿಂಗ್ ಮಾಡಿದ ನಂತರ ರಾವ್ ಅವರ ಹೇಳಿಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News