ಉನಾ ದಲಿತರ ಪ್ರಕರಣಗಳನ್ನು ಹಿಂದೆಗೆದುಕೊಳ್ಳದಿದ್ದರೆ ಜೂ.1ರಂದು ಗುಜರಾತ ಬಂದ್ಗೆ ಮೇವಾನಿ ಕರೆ

Update: 2022-05-04 18:12 GMT

ಅಹ್ಮದಾಬಾದ್,ಮೇ 4: ಗುಜರಾತಿನ ಶಾಸಕ ಜಿಗ್ನೇಶ ಮೇವಾನಿಯವರು 2016ರಲ್ಲಿ ಉನಾ ಪ್ರತಿಭಟನೆಗಳ ಸಂದರ್ಭ ದಲಿತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂದೆಗೆದುಕೊಳ್ಳದಿದ್ದರೆ ಜೂ.1ರಂದು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.


ತನ್ನ ವಿರುದ್ಧ ಬೆನ್ನುಬೆನ್ನಿಗೆ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ಅಸ್ಸಾಮಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ ಬಳಿಕ ಮಂಗಳವಾರ ಸಂಜೆ ಅಹ್ಮದಾಬಾದ್ಗೆ ಆಗಮಿಸಿದ ಬಳಿಕ ವಡಾಜ್ ಪ್ರದೇಶದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಮೇವಾನಿ ಮುಷ್ಕರಕ್ಕೆ ಕರೆ ನೀಡಿದರು.
2016ರಲ್ಲಿ ಮೃತದನದ ಚರ್ಮವನ್ನು ಸುಲಿಯುತ್ತಿದ್ದಕ್ಕಾಗಿ ನಾಲ್ವರು ದಲಿತರನ್ನು ವಿವಸ್ತ್ರಗೊಳಿಸಿ ಥಳಿಸಿದ್ದ ಮೇಲ್ಜಾತಿಗೆ ಸೇರಿದ ಗುಂಪೊಂದು ಬಳಿಕ ಅವರ ಹತ್ಯೆಗೈದಿತ್ತು. ಈ ಘಟನೆಯು ಗುಜರಾತಿನಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು ಮತ್ತು ಮೇವಾನಿ ದಲಿತ ಆಂದೋಲನದ ಮುಖವಾಗಿ ಹೊರಹೊಮ್ಮಿದ್ದರು.


‘ಪಾಟಿದಾರ್ ಆಂದೋಲನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಾಪಸ್ ಪಡೆದಂತೆ ಉನಾ ಪ್ರಕರಣಗಳನ್ನೂ ಹಿಂದೆಗೆದುಕೊಳ್ಳಬೇಕು. ಅವರು ಪಾಟಿದಾರ್ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಂಡಿದ್ದು ಒಳ್ಳೆಯ ಕೆಲಸವಾಗಿದೆ ಮತ್ತು ನಾವು ಅದನ್ನು ಬೆಂಬಲಿಸುತ್ತೇವೆ ’ಎಂದು ಮೇವಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News