ಕುತ್ಪಾಡಿಯಲ್ಲಿ ಭತ್ತದ ಚಾಪೆ ನೇಜಿ ತಯಾರಿಕಾ ಘಟಕ; ಶಾಸಕ ರಘುಪತಿ ಭಟ್ ಉದ್ಘಾಟನೆ

Update: 2022-05-22 17:36 IST
  • whatsapp icon

ಉಡುಪಿ ;  ಕೇದಾರೋತ್ಥಾನ ಟ್ರಸ್ಟ್, ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ಉಡುಪಿಯಲ್ಲಿ ಕೈಗೊಂಡಿರುವ ೨ನೇ ಹಂತದ ಹಡಿಲು ಭೂಮಿ ಕೃಷಿ ಮಾಡಲು ಬೇಕಾದ ಭತ್ತದ ಚಾಪೆ ನೇಜಿ ತಯಾರಿಕಾ ಘಟಕ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿಯಲ್ಲಿ ನಿರ್ಮಿಸಲಾಗಿದ್ದು, ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷರು, ಶಾಸಕರಾದ ಕೆ ರಘುಪತಿ ಭಟ್ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್ ನ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ದಿನಕರ್ ಬಾಬು, ಕೃಷಿಕ ರಾದ ವನಜಾ ಜಯಕರ್, ಜುಲಿಯನ್ ದಾಂತಿ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ವಿಜ್ಞಾನಿಗಳಾದ ಶಂಕರ್, ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಣೇಶ್, ಭೂ ಮಾಲಕರಾದ ಶ್ರೇಯಬ್, ಸ್ಥಳೀಯರಾದ ರಿಕೇಶ್ ಹಾಗೂ ಕಡೆಕಾರ್ ಮತ್ತು ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News