ಮಧ್ಯಪ್ರದೇಶ: ಜಾತ್ರೆಯಲ್ಲಿ ಪಾನಿ ಪುರಿ ಸೇವಿಸಿ 97 ಮಕ್ಕಳು ಅಸ್ವಸ್ಥ

Update: 2022-05-29 12:56 IST
ಮಧ್ಯಪ್ರದೇಶ: ಜಾತ್ರೆಯಲ್ಲಿ ಪಾನಿ ಪುರಿ ಸೇವಿಸಿ 97 ಮಕ್ಕಳು ಅಸ್ವಸ್ಥ
ಸಾಂದರ್ಭಿಕ ಚಿತ್ರ,Photo: PTI
  • whatsapp icon

ಮಂಡಲಾ: ಸುಮಾರು 97 ಮಕ್ಕಳು  ಜಾತ್ರೆಯೊಂದರಲ್ಲಿ ಪಾನಿಪುರಿ ಸೇವಿಸಿ ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಮಂಡಲಾ ಜಿಲ್ಲೆಯ ಸಿಂಗಾರ್ ಪುರ್ ಪ್ರದೇಶದಲ್ಲಿ ನಡೆದಿದೆ.

ವಿಷಾಹಾರ ಸೇವನೆಯಿಂದ 97 ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಅಸ್ವಸ್ಥಗೊಂಡ ಎಲ್ಲ ಮಕ್ಕಳು ಒಂದೇ ಅಂಗಡಿಯಲ್ಲಿ ಪಾನಿಪುರಿ ಸೇವಿಸಿದ್ದರು. ಶನಿವಾರ ಸಂಜೆ ಸುಮಾರು 7:30ಕ್ಕೆ ಮಕ್ಕಳಿಗೆ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೆ.ಆರ್. ಶಾಖ್ಯ ಹೇಳಿದ್ದಾರೆ.

ಪಾನಿಪುರಿ ಮಾರಾಟಗಾರನನ್ನು ಬಂಧಿಸಲಾಗಿದ್ದು, ಆತ ಬಳಸುತ್ತಿದ್ದ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News