ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಪ್ರಕರಣ: ಮೂವರ ಬಂಧನ

Update: 2022-05-30 15:50 GMT
 ಭರತ್ ಶೆಟ್ಟಿ

ಬೆಂಗಳೂರು: ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭರತ್ ಶೆಟ್ಟಿ ಹಾಗೂ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 

ಟಿಕಾಯತ್ ಮೇಲೆ ಹಲ್ಲೆ ನಡೆಸಿದ ಬಳಿಕ  ‘ಜೈ ಮೋದಿ, ಮೋದಿ' ಎಂದು ಘೋಷಣೆ ಕೂಗಿ, ಮೋದಿ ಭಾವಚಿತ್ರ ಸಹ ಪ್ರದರ್ಶಿಸಿದ್ದರು. ಇಬ್ಬರು ಮಹಿಳೆಯರು ಸಹ ಆರೋಪಿಗಳ ಜೊತೆಗಿದ್ದರು. ಆದರೆ, ಘಟನೆ ಬಳಿಕ ಮೂವರು ಮಾತ್ರ ಸಿಕ್ಕಿಬಿದ್ದಿದ್ದು, ಉಳಿದವರು ಪರಾರಿಯಾಗಿದ್ದಾರೆ.

ಹಲ್ಲೆಯಿಂದ ರಾಕೇಶ್ ಟಿಕಾಯತ್ ಅವರ ಕೈಗೆ ಗಾಯವಾಗಿದೆ. ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ ಬಳಿಕ ಮತ್ತೆ ಗಾಂಧಿಭವನದಲ್ಲಿ ನಡೆದ ಸಭೆಗೆ ಕರೆತಲಾಯಿತು.

ಘಟನೆಯಿಂದಾಗಿ ಏಕಾಏಕಿ ಸಭಾಂಗಣದಲ್ಲಿ ಭೀತಿ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ದಾಳಿಕೋರರು ಟಿಕಾಯತ್, ಚುಕ್ಕಿ ನಂಜುಂಡಸ್ವಾಮಿ ಹಾಗೂ ಕವಿತಾ ಕುರುಗುಂಟಿ ಅವರ ಮೇಲೆ ಮಸಿ ಎರಚಿದ್ದಲ್ಲದೆ ಸಭೆಯಲ್ಲಿದ್ದವರ ಮೇಲೆಯೂ ದಾಳಿಗೆ ಮುಂದಾಗಿದ್ದರು. ಈ ವೇಳೆ ರೈತರು ಮತ್ತು ದಾಳಿಕೋರರ ನಡುವೆ ಸಂಘರ್ಷವೇರ್ಪಟ್ಟಿತ್ತು. ಆನಂತರ, ದುಷ್ಕರ್ಮಿಗಳನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಸಭೆ ಮುಂದುವರಿಯಿತು.

ಬಂಧಿತರ ವಿರುದ್ಧ ಮೊಕದ್ದಮೆ

ಬಂಧಿತ ಮೂವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 355, 345, 324, 504, 506, 323, 134 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಇವರ ವಿಚಾರಣೆ ತೀವ್ರಗೊಳಿಸಲಾಗಿದೆ ಎಂದು ಬೆಂಗಳೂರಿನ ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಶರಣಪ್ಪ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News