ಉಡುಪಿ ಶಿಕ್ಷಣ ಇಲಾಖೆ- ಮಾಹೆ ನಡುವೆ ಒಡಂಬಡಿಕೆ

Update: 2022-06-03 20:23 IST

ಉಡುಪಿ : ಉಡುಪಿ ತಾಲೂಕಿನ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಿಟಿ ಬಸ್ ನಿಲ್ದಾಣದ ಹತ್ತಿರವಿರುವ ಸಮನ್ವಯ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಫಿಸಿಯೋಥೆರಫಿ, ಅಕ್ಯುಫೆಶನ್ ಥೆರಫಿ, ಸ್ಪೀಚ್ ಥೆರಫಿ, ಕ್ಲಿನಕ್ ಸೈಕೋಲಜಿ  ಮತ್ತು ಅಪ್ಟೋಮೆಟ್ರಿ ತಜ್ಞ ವೈದ್ಯರ ಸೇವೆಯನ್ನು ನಿರಂತರವಾಗಿ ಮಣಿಪಾಲದ ಮಾಹೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ನಡುವೆ ಒಡಂಬಡಿಕೆಗೆ ಸಹಿ ಮಾಡಲಾಯಿತು.

ಮಣಿಪಾಲ ಮಾಹೆ ಸಂಸ್ಥೆಯ ಡೀನ್ ಡಾ.ಅರುಣ್ ಮತ್ತು ಇಲಾಖೆ ಉಪನಿರ್ದೇಶಕ ಗೋವಿಂದ ಮಡಿವಾಳ ಒಡಂಬಡಿಕೆಗೆ ಸಹಿಯನ್ನು ಮಾಡಿದರು. ಇದೊಂದು ರಾಜ್ಯದಲ್ಲಿಯೇ ಮಾದರಿಯಾದ ಸರಕಾರಿ -ಖಾಸಗಿ ಸಹಭಾಗಿತ್ವದ ಯೋಜನೆಯಾಗಿದೆ. ಮುಂದೆ ಇದನ್ನು ಜಿಲ್ಲೆಯಾದ್ಯಂತ ವಿಸ್ತರಿಸುವ ಆಶಯವು ಮಾಹೆ ಹೊಂದಿದೆ ಎಂದು ಅರುಣ್ ಮಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಮಾಹೆಯ ಡಾ.ವೆಂಕಟರಾಜ ಐತಾಳ್, ಡಾ.ರಶ್ಮಿ, ಡಾ.ಭಾಮಿನಿ, ಡಾ. ಸುನೀಲಾ, ದಾನಿಗಳಾದ ಡಾ.ಶಿವಾನಂದ ನಾಯಕ್, ಗಂಗೇ ಶಾನುಭಾಗ್, ಉಪಯೋಜನಾ  ಸಮನ್ವಯಾಧಿಕಾರಿ ಚಂದ್ರ ನಾಯ್ಕ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಅಶೋಕ್ ಕಾಮತ್ ಸ್ವಾಗತಿಸಿದರು. ಬಿಆರ್‌ಸಿ ಸಮನ್ವಯಾಧಿಕಾರಿ ಉಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News