ಹಿಮಾಚಲ ಪ್ರದೇಶ: ಕೇಬಲ್ ಕಾರ್ ಸ್ಥಗಿತ, ಸಿಲುಕಿಕೊಂಡ ಪ್ರವಾಸಿಗರು
Update: 2022-06-20 15:13 IST

ಶಿಮ್ಲಾ: ಹಿಮಾಚಲ ಪ್ರದೇಶದ ಪರ್ವಾನೂದಲ್ಲಿ ಸೋಮವಾರ ಮಧ್ಯಾಹ್ನ ಕೇಬಲ್ ಕಾರ್ ಮಧ್ಯದಲ್ಲಿಯೇ ಸ್ಥಗಿತಗೊಂಡಿದ್ದು ಕನಿಷ್ಠ ಎಂಟು ಜನರು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು NDTV ವರದಿ ಮಾಡಿದೆ.
ಕೇಬಲ್ ಕಾರ್ ಟಿಂಬರ್ ಟ್ರಯಲ್ ಖಾಸಗಿ ರೆಸಾರ್ಟ್‌ನ ವೈಶಿಷ್ಟ್ಯವಾಗಿದೆ. ಇದು ಪ್ರದೇಶದಾದ್ಯಂತ ಜನಪ್ರಿಯವಾಗಿದೆ.
ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಕೇಬಲ್‌ನಲ್ಲಿ ಟ್ರಾಲಿಯನ್ನು ತರಲಾಗಿದೆ ಎಂದು ಸೋಲನ್ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
"ಟಿಂಬರ್ ಟ್ರಯಲ್ ಆಪರೇಟರ್‌ನ ತಾಂತ್ರಿಕ ತಂಡವನ್ನು ನಿಯೋಜಿಸಲಾಗಿದೆ ಹಾಗೂ ಪೊಲೀಸ್ ತಂಡವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಎಎನ್‌ಐಗೆ ತಿಳಿಸಿದರು.