ಕುಂಡಂತಾಯರಿಗೆ ಪತ್ರಿಕಾ ದಿನದ ಗೌರವ: ಜೂ.30ಕ್ಕೆ ಕುಂಜೂರಲ್ಲಿ ಪ್ರಶಸ್ತಿ ಪ್ರದಾನ

Update: 2022-06-28 14:25 GMT

ಉಡುಪಿ, ಜೂ.28: ಹಿರಿಯ ಪತ್ರಕರ್ತ, ಯಕ್ಷಪ್ರಭಾ ಸಂಪಾದಕ ಕೆ.ಎಲ್. ಕುಂಡಂತಾಯ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ ಪತ್ರಿಕಾ ದಿನದ ಗೌರವವನ್ನು ಘೋಷಿಸಿದ್ದು, ಜೂನ್ 30ರಂದು ಅವರ ನಿವಾಸದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಜೂ.30ರಂದು ನಡೆಯುವ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು ಅವರು ಹಿರಿಯ ಪತ್ರಕರ್ತ ಪ್ರತಿನಿಧಿ ಸಂಪಾದಕ ಡಾ. ಉದಯ ರವಿ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.

70ರ ಹರೆಯದ ದಣಿವರಿಯದ ಕುಂಡಂತಾಯ ಅವರು 20 ವರ್ಷಗಳ ಕಾಲ ಉದಯವಾಣಿ ದೈನಿಕದಲ್ಲಿ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿ ಇದೀಗ ಕಟೀಲು ಕ್ಷೇತ್ರದಿಂದ ಪ್ರಕಟವಾಗುವ ಯಕ್ಷಪ್ರಭಾ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನಿರಂತರ ಶೋಧನೆ, ಸಂಶೋಧನೆಯ ಮನೋಭಾವವುಳ್ಳ ಸಜ್ಜನ ಸಾಹಿತಿಯಾಗಿದ್ದಾರೆ. 

ವಿಶ್ವನಾಥ ಶೆಣೈ, ಕರುಣಾ ಸುರೇಶ್ ಪೈ, ಎಸ್.ಆರ್.ಬಂಡಿಮಾರ್, ಪುನೀತ್ ಎಂ, ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ, ಜನಾರ್ದನ ಕೊಡವೂರು, ರಾಕೇಶ್ ಕುಂಜೂರು ಸಹಿತ ಆಹ್ವಾನಿತ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಬಿ.ಎ.ಸನದಿ, ಮಲ್ಲಾರು ಜಯರಾಮ ರೈ, ಎಂ.ವಿ.ಕಾಮತ್, ಸತೀಶ್ ಪೈ ಮಣಿಪಾಲ, ಕು.ಗೋ.ಉಡುಪಿ, ನಾದವೈಭವಂ ಉಡುಪಿ ವಾಸುದೇವ ಭಟ್ ಸೇರಿ ಹಲವು ಹಿರಿಯ ಸಾಹಿತಿಗಳು ಹಾಗೂ ಪತ್ರಕರ್ತರು ಈ ಪ್ರಶಸ್ತಿಗೆ ಬಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News