ಗದ್ದೆಯ ಹೊಂಡಕ್ಕೆ ಬಿದ್ದು ಮಹಿಳೆ ಮೃತ್ಯು

Update: 2022-07-05 21:16 IST
  • whatsapp icon

ಕೋಟ, ಜು.೫: ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಅಕಸ್ಮಿಕವಾಗಿ ಹೊಂಡದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಜು.೪ರಂದು ಮಧ್ಯಾಹ್ನ ವೇಳೆ ಹಲ್ತೂರು ಎಂಬಲ್ಲಿ ನಡೆದಿದೆ.

ಮೃತರನ್ನು ಹಲ್ತೂರಿನ ಲಕ್ಷ್ಮಿ (೬೬) ಎಂದು ಗುರುತಿಸಲಾಗಿದೆ. ಇವರು ಗದ್ದೆ ಯಲ್ಲಿ ಕೃಷಿ ಕೆಲಸ ಮಾಡಲು ಹೋಗಿದ್ದು, ಈ ವೇಳೆ ಗದ್ದೆಯ ಪಕ್ಕದಲ್ಲಿರುವ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿ ದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News