ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿ ಬಾಬುಲ್ ಸುಪ್ರಿಯೊ ನೇಮಕ

Update: 2022-07-10 10:05 GMT
Photo:PTI

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಬಾಬುಲ್ ಸುಪ್ರಿಯೊ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ನೇತೃತ್ವದ  ಪಕ್ಷದ ಮೂಲಗಳು ತಿಳಿಸಿವೆ.

ಮಾಜಿ ಕೇಂದ್ರ ಸಚಿವರಾದ ಸುಪ್ರಿಯೊ ಅವರು ಟ್ವಿಟರ್‌ನಲ್ಲಿ ಹೊಸ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಪಕ್ಷದ ವರಿಷ್ಠರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸುಪ್ರಿಯೊ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿರುವುದು ಬಂಗಾಳದ ಹೊರಗೆ ತನ್ನ ನೆಲೆಯನ್ನು ವಿಸ್ತರಿಸಲು ಪಕ್ಷವು ರೂಪಿಸಿದ ಕಾರ್ಯತಂತ್ರದ ಒಂದು ಭಾಗವಾಗಿದೆ ಎಂದು ಹಿರಿಯ ಟಿಎಂಸಿ ನಾಯಕರೊಬ್ಬರು ಹೇಳಿದ್ದಾರೆ.

"ಸುಪ್ರಿಯೊ ಅವರು ಗಾಯಕ ಹಾಗೂ  ರಾಜಕಾರಣಿಯಾಗಿ ದೇಶಾದ್ಯಂತ ಚಿರಪರಿಚಿತ ಮುಖವಾಗಿದ್ದಾರೆ. ಆದ್ದರಿಂದ ಅವರು ನಮ್ಮ ಅಭಿಪ್ರಾಯಗಳು ಮತ್ತು ನೀತಿಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಇರಿಸಲು ನಮಗೆ ಸಹಾಯ ಮಾಡಬಹುದು" ಎಂದು ಟಿಎಂಸಿ ನಾಯಕ ಹೇಳಿದರು.

ಬಿಜೆಪಿಯ ಮಾಜಿ ಸಂಸದರಾಗಿದ್ದ ಸುಪ್ರಿಯೊ ಅವರನ್ನು ಕಳೆದ ವರ್ಷ ಕೇಂದ್ರ ಸಚಿವಾಲಯದಿಂದ ಕೈಬಿಡಲಾಯಿತು, ನಂತರ ಅವರು ಟಿಎಂಸಿಗೆ ಪಕ್ಷಾಂತರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News