ಬೆಂಕಿ ಅಕಸ್ಮಿಕ: ಗಾಯಾಳು ವೃದ್ಧೆ ಮೃತ್ಯು
Update: 2022-07-31 21:30 IST

ಉಡುಪಿ: ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಅಂಬಲಪಾಡಿ ಸಮೀಪದ ಪಂದುಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಪಂದುಬೆಟ್ಟುವಿನ ರುಕ್ಮಿಣಿ (80) ಎಂದು ಗುರುತಿಸಲಾಗಿದೆ. ಇವರು ಜು.28ರಂದು ಮಧ್ಯಾಹ್ನ ದೇವರ ಕೋಣೆಯಲ್ಲಿ ದೀಪ ಹಚ್ಚಿ ಊದು ಬತ್ತಿಯನ್ನು ಬಗ್ಗಿ ತೆಗೆಯುವಾಗ ಅವರು ಉಟ್ಟಿದ್ದ ಸೀರೆಗೆ ದೀಪದ ಬೆಂಕಿ ತಗುಲಿತ್ತೆನ್ನಲಾಗಿದೆ. ಇದರಿಂದ ಮೈಗೆ ಬೆಂಕಿ ಹತ್ತಿಕೊಂಡಿದ್ದು, ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರ ಸ್ಥಿತಿ ಯಲ್ಲಿದ್ದ ರುಕ್ಮಿಣಿ ಚಿಕಿತ್ಸೆ ಫಲಕಾರಿಯಾಗದೆ ಜು.31ರಂದು ಬೆಳಗ್ಗೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.