ಬೆಂಗಳೂರು: ಅರ್ಧ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಪೇದೆಗೆ ದಂಡ!
ಬೆಂಗಳೂರು: ಅರ್ಧ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಪೇದೆಗೆ ದಂಡ ವಿಧಿಸಿದ್ದು, ಸಂಚಾರ ಪೊಲೀಸರ ಈ ಕ್ರಮವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಅರ್ಧ ಹೆಲ್ಮೆಟ್ ವಿರುದ್ದ ಕಾರ್ಯಾಚರಣೆ ಆರಂಭಿಸಿರುವ ಆರ್ ಟಿ ನಗರದ ಸಂಚಾರ ಪೊಲೀಸರು, ಪೆದೆಯೊಬ್ಬರಿಂದ ದಂಡ ವಸೂಲು ಮಾಡುವ ಫೋಟೋ ಸಹಿತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲ ವೈರಲ್ ಆಗುತ್ತಿದೆ.
'ನಿಯಮಗಳನ್ನು ಉಲ್ಲಂಘಿಸಿದ ಯಾರನ್ನೂ ಬಿಡುವುದಿಲ್ಲ' ಎಂದು ಪೊಲೀಸರ ಈ ಕ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ಆನ್‌ಲೈನ್ ಮೂಲಕ ಕೆಲವರು ಪೊಲೀಸ್ ಕೂತಿರುವ ವಾಹನದ ಸಂಖ್ಯೆ ನೋಡಿ, ಸ್ಕೂಟರ್ ಮೇಲೆ ಏಳು ಪ್ರಕರಣಗಳಿವೆ ಎಂದು ಬಹಿರಂಗಪಡಿಸಿದ್ದಾರೆ. ಇನ್ಸುರೆನ್ಸ್, ಎಮಿಷನ್ ಕೂಡಾ ಇಲ್ಲ, ಕೇವಲ ಹೆಲ್ಮೆಟ್‌ಗೆ ಮಾತ್ರ ಹೇಗೆ ದಂಡ ವಿಧಿಸಿ ಕಳಿಸಿದ್ದೀರ?" ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
Good evening sir
— R T NAGAR TRAFFIC BTP (@rtnagartraffic) October 17, 2022
half helmet case booked against police
Tq pic.twitter.com/Xsx5UA40OY