ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿಲ್ಲ: ನಟ ಡಾಲಿ ಧನಂಜಯ್ ಸ್ಪಷ್ಟನೆ

Update: 2022-10-26 12:38 GMT
photo - twitter

ಬೆಂಗಳೂರು: ಡಾಲಿ ಧನಂಜಯ್ (Dhananjay) ಅಭಿನಯದ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ 'ಹೆಡ್‌ಬುಷ್' ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ನಟ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ನಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಚಿತ್ರದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅಪಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರವನ್ನು ನೋಡದವರು ಈ ಬಗ್ಗೆ ಆಕ್ಷೇಪ ಎತ್ತುತ್ತಿದ್ದಾರೆ ಎಂದ ಅವರು, 'ಚಿತ್ರದಲ್ಲಿ ಅದು ನಿಜವಾದ ವೀರಗಾಸೆ ಕಲಾವಿದರ ಪಾತ್ರಧಾರಿಗಳಿಗೆ ನಾನು ಹೊಡೆಯುವ ದೃಶ್ಯವಲ್ಲ.  ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿದ ಪಾತ್ರಧಾರಿಗಳಿಗೆ ನಾನು ಜಯರಾಜ್ ಪಾತ್ರಧಾರಿ ಹೊಡೆಯುವ ದೃಶ್ಯವದು. ನಿಜವಾದ ಕಲಾವಿದರ ಪಾತ್ರಧಾರಿಗಳು ಹಿಂದೆ ಚಪ್ಪಲಿ ಇಲ್ಲದೆ ಇದ್ದಾರೆ. ನಕಲಿ ಪಾತ್ರಧಾರಿಗಳು ಕಾಲಿಗೆ ಶೂ ಧರಿಸಿಕೊಂಡಿದ್ದಾರೆ. ನಾನು ವೀರಗಾಸೆ ಪಾತ್ರಗಳನ್ನು ಶಾಲೆ, ಕಾಲೇಜುಗಳಲ್ಲಿ ಮಾಡುತ್ತಿದ್ದೆ, ನನಗೆ ಆ ಕಲೆಯ ಬಗ್ಗೆ ಅಪಾರ ಗೌರವವಿದೆ, ಅವರಿಗೆ ಅವಮಾನ ನಾನು ಮಾಡಲು ಸಾಧ್ಯವೇ ಇಲ್ಲ. ಈ ಪಾತ್ರಗಳನ್ನು ಎಲ್ಲಿಯೂ ತಪ್ಪುಗಳು ಸಂಭವಿಸದಂತೆ ಚರ್ಚಿಸಿಯೇ ಮಾಡಿದ್ದೇವೆ' ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News