ಮಂಗಳೂರು: ಯುವಜನ ಹಬ್ಬಕ್ಕೆ ಚಾಲನೆ; ಮೊದಲ ದಿನ ಸಿನಿಮಾ ಹಬ್ಬ
ಮಂಗಳೂರು, ಅ.28; ಸಂವಾದ ಯುವಸಂಪನ್ಮೂಲ ಕೇಂದ್ರ ಮಂಗಳೂರು ಮತ್ತು ಯುವ ಮುನ್ನಡೆ ಮಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಯುವಜನ ಹಬ್ಬದ ಅಂಗವಾಗಿ ಇಂದು ನಗರದ ಮಂಗಳೂರಿನ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಸಿನಿಮಾ ಹಬ್ಬ ವನ್ನು ಸಂತ ಅಲೋಷಿಯಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಈ ವರುಷ ನಾವು ಸಂವಿಧಾನವನ್ನು ಸಂಭ್ರಮಿಸುತ್ತಾ, ಯುವಜನ ಹಬ್ಬವನ್ನು “ಕರ್ತವ್ಯ ಪಾಲನೆಗಾಗಿ ಯುವಜನರ ಅಭಿವ್ಯಕ್ತಿ” ಶೀರ್ಷಿಕೆಯಡಿಯಲ್ಲಿ ಎರಡು ದಿನ ಹಮ್ಮಿಕೊಳ್ಳಲಾಗಿದೆ. ಯುವಜನ ಹಬ್ಬದ ಭಾಗವಾಗಿ ಮೊದಲ ದಿನದ ಸಿನಿಮಾ ಹಬ್ಬಕ್ಕೆ ಶುಭ ಹಾರೈಸುವುದಾಗಿ ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಮಾಧ್ಯಮ ಮತ್ತು ಸಂವಹನ ವಿಭಾಗ ಬದುಕು ಕಲಿಕಾ ಕೇಂದ್ರದ ಸಂಚಾಲಕರಾದ ರಾದ ಮುರಳಿ ಮೋಹನ್ ಕಾಟಿ ಮಾತನಾಡುತ್ತಾ, ಯುವ ಜನ ಹಬ್ಬ, ಸಿನಿಮಾ ಹಬ್ಬದ ಉದ್ದೇಶದ ಬಗ್ಗೆ ವಿವರಿಸುತ್ತಾ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪರಿಸರ, ಆರೋಗ್ಯ, ಲಿಂಗಸಮಾನತೆ, ಸಾಮಾಜಿಕ ನ್ಯಾಯ, ಸಾಮಾಜಿಕ ಸೌಹಾರ್ದತೆಯ ವಿಚಾರದಲ್ಲಿ ಯುವಜನ ಶಿಕ್ಷಣದಲ್ಲಿ ತೊಡಗಿಸಿ ಕೊಂಡಿರುವ ಸಂವಾದ ಸಂಸ್ಥೆ ಮತ್ತು ಅದರ ಅಂಗವಾದ ಬದುಕು ಜೀವನೋಪಾಯ ಕಲಿಕಾ ಕೇಂದ್ರ ಹಾಗೂ ಸಂವಾದದ ಒಡನಾಡಿ ಯುವಜನ ಮುಂದಾಳುಗಳ ಸಾಮೂಹಿಕ ಪ್ರಯತ್ನ ಎಂದರು.
ಕಾರ್ಯಕ್ರಮ ನಿರೂಪಿಸಿದ ಡಾಕ್ಯೂಮೆಂಟ ರಿ ಫಿಲ್ಮ್ ಮೇಕರ್ ನಟೇಶ್ ಉಳ್ಳಾಲ್ ಮಾತನಾಡುತ್ತಾ, ಎರಡು ದಿನಗಳ ಕಾರ್ಯಕ್ರಮ ಗಳ ಮಾಹಿತಿ ನೀಡುತ್ತಾ, ಮಂಗಳೂರಿನ ಸ್ಕೂಲ್ ಆಪ್ ಸೋಷಲ್ ವರ್ಕ್ ರೋಶನಿ ನಿಲಯದ ಮರಿಯ ಪೈವಾ ಸಭಾಂಗಣದಲ್ಲಿ ಎರಡನೆ ದಿನ“ಕರ್ತವ್ಯ ಪಾಲನೆಗಾಗಿ ಯುವಜನರ ಅಭಿವ್ಯಕ್ತಿ” ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ.ಕರ್ನಾಟಕದಲ್ಲಿರುವ 15 ರಿಂದ 29ವರ್ಷ ವಯಸ್ಸಿನವರ ಸಂಖ್ಯೆ ಸುಮಾರು 1.7 ಕೋಟಿ ಇದ್ದಾರೆ. ಆದರೆ ಕೋಮುವಾದ, ಲೈಂಗಿಕ ದೌರ್ಜನ್ಯ, ಹಿಂಸೆ, ನಿರುದ್ಯೋಗ, ಹವಮಾನ ಬಿಕ್ಕಟ್ಟು, ಪ್ರಾಕೃತಿಕ ವಿಕೋಪಗಳು ಇವೇ ಮೊದಲಾದವುಗಳಿಂದ ಒಟ್ಟು ಯುವಜನರ ಭವಿಷ್ಯ ಬಿಕ್ಕಟ್ಟಿನಲ್ಲಿದೆ. ಹಾಗಾಗಿ ನಮ್ಮ ಸಂವಿಧಾನ ಬದ್ಧ ಕರ್ತವ್ಯಗಳನ್ನು ಪಾಲಿಸುವಂತೆ ನಮಗೆ ನಾವೇ ಪ್ರೇರೇಪಿಸಲು, ಜಾಗೃತಿ ಮೂಡಿಸಲು ಹಾಗೂ ಮುಖ್ಯವಾಗಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಅವುಗಳನ್ನು ಸಂಭ್ರಮಿಸಲು ಈ ಯುವಜನ ಹಬ್ಬವನ್ನು ರೂಪಿಸಲಾಗಿದೆ. ನಮ್ಮ ಕರ್ತವ್ಯಗಳಾದ,ವಿವಿಧ ಧರ್ಮ, ಭಾಷೆ ಮತ್ತು ಪ್ರಾಂತ್ಯಗಳ ಜನರೊಂದಿಗೆ ಸೌಹಾರ್ದದಿಂದ ಇರುವುದು, ಮಹಿಳೆಯ ಗೌರವದಿಂದ, ಸಮಾನತೆಯಿಂದಿರುವುದು. ದೇಶದ ಕಾಡು, ವನ್ಯ ಜೀವಿಗಳು, ನದಿಗಳು ಸೇರಿದಂತೆ ಪರಿಸರವನ್ನು ಉಳಿಸಿ ಬೆಳೆಸುವುದು, ಇವೇ ಕೆಲವು ಕರ್ತವ್ಯಗಳನ್ನು ಕೇಂದ್ರವಾ ಗಿರಿಸಿಕೊಂಡು ಯುವಜನ ಹಬ್ಬವನ್ನು ದೃಶ್ಯ, ಕಾವ್ಯ, ನಡೆ, ನುಡಿ ಇವೇ ಮಾಧ್ಯಮದ ಮೂಲಕ ಜಿಲ್ಲೆಯ ಬೇರೆ ಬೇರೆ ಸ್ತರದ ಯುವಜನರನ್ನು ತಲುಪವಂತೆ ಈ ಹಬ್ಬವನ್ನು ವಿನ್ಯಾಸ ಮಾಡಲಾಗಿದೆ ಎಂದರು.