ಕನ್ನಡಿಗರು ಧರ್ಮ ಭೇದವಿಲ್ಲದೆ ಸಹೋದರರಂತೆ ಬಾಳಬೇಕು: ರಜನಿಕಾಂತ್ ಕರೆ

Update: 2022-11-01 14:45 GMT

ಬೆಂಗಳೂರು, ನ.1: 'ನಾಡಿನ ಏಳು ಕೋಟಿ ಕನ್ನಡಿಗರು ಜಾತಿ, ಧರ್ಮದ ಭೇದವಿಲ್ಲದೆ ಸಹೋದರರಂತೆ ಬಾಳಬೇಕೆಂದು ರಾಜರಾಜೇಶ್ವರಿ, ಅಲ್ಲಾಹ್  ಹಾಗೂ ಜೀಸಸ್ ಬಳಿ ಪ್ರಾರ್ಥಿಸುವೆ' ಎಂದು ಹಿರಿಯ ನಟ ರಜನಿಕಾಂತ್ (Rajinikanth) ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧ ಮುಂಭಾಗ ರಾಜ್ಯ ಸರಕಾರದ ವತಿಯಿಂದ ಆಯೋಜಿಸಿದ್ದ ಡಾ.ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

''ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಯಗಳು. ಇಂದು ಕರ್ನಾಟಕ ರತ್ನ ಪ್ರಶಸ್ತಿ ಅನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರದಾನಿಸಿರುವುದು ಸಂತಸದ ವಿಚಾರ. ಈ ಹಿಂದೆಯೂ ಇಂತಹ ಶ್ರೇಷ್ಠ ಇದೇ ವೇದಿಕೆಯಲ್ಲಿ ಡಾ.ರಾಜ್‍ಕುಮಾರ್ ಅವರಿಗೂ ಪ್ರಶಸ್ತಿ ಪ್ರದಾನಿಸಲಾಗಿತ್ತು. ಅದೇ ರೀತಿ, ಕುವೆಂಪು, ನಿಜಲಿಂಗಪ್ಪ, ಶಿವಕುಮಾರಸ್ವಾಮೀ ಅವರೂ ಭಾಜನರಾಗಿದ್ದರು'' ಎಂದು ನುಡಿದರು.

ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ 

Full View

Similar News