ಬೆಂಗಳೂರು | ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಟೆಕ್ಕಿಯ ಬಂಧನ
Update: 2022-12-06 12:42 GMT
ಬೆಂಗಳೂರು, ಡಿ. 6: ಕನ್ನಡ ಬಾವುಟಕ್ಕೆ ಬೆಂಕಿಯಿಟ್ಟ ಆರೋಪದಡಿ ಖಾಸಗಿ ಕಂಪೆನಿಯ ಸಾಫ್ಟ್ ವೇರ್ ಇಂಜಿನಿಯರ್ ನನ್ನು ಎಚ್‍ಎಸ್‍ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕರುನಾಡು ಸೇವಕರು ಸಂಘದ ಯುವ ಅಧ್ಯಕ್ಷ ನವೀನ್ ನರಸಿಂಹ ನೀಡಿದ ದೂರಿನ ಮೇರೆಗೆ ಸಾಫ್ಟ್‍ವೇರ್ ಇಂಜಿನಿಯರ್ ಅಮೃತೇಶ್ ತಿವಾರಿ(30)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಮಾಡುತ್ತಿದ್ದ ಅಮೃತೇಶ್ ಡಿ.4ರಂದು ಎಚ್‍ಎಸ್‍ಆರ್ ಲೇಔಟ್‍ನ ಪರಂಗಿಪಾಳ್ಯದಲ್ಲಿ ಕನ್ನಡ ಬಾವುಟವನ್ನು ಸುಟ್ಟು ಹಾಕಿದ್ದಾನೆ. ಕೃತ್ಯ ನಡೆಸಿದ ವಾರಣಾಸಿ ಮೂಲದ ಅಮೃತೇಶ್ ತಿವಾರಿನನ್ನು ಪೊಲೀಸರು ಬಂಧಿಸಿದ್ದಾರೆ