ಉಡುಪಿ: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಸದಸ್ಯತನ ಮಾಹಿತಿ ಕಾರ್ಯಗಾರ

Update: 2022-12-31 16:43 GMT

ಉಡುಪಿ: ವ್ಯರ್ಥವಾಗದಿರಲಿ ಯೌವನ ಎಂಬ ಘೋಷವಾಕ್ಯ ದೊಂದಿಗೆ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಪೇಡರೇಶನ್ ಇದರ 2023-24ನೇ ಸಾಲಿನ ಸದಸ್ಯತನದ ಮಾಹಿತಿ ಕಾರ್ಯಗಾರವು ಉಡುಪಿ ಡಿವಿಷನ್ ವತಿಯಿಂದ ಶುಕ್ರವಾರ ಅಂಬಾಗಿಲಿನ ಡಿವಿಷನ್ ಕಛೇರಿಯಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳೂರು ಇವರು ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ಡಿವಿಷನ್ ಅಧ್ಯಕ್ಷ  ಇಬ್ರಾಹಿಂ ಫಾಲಿಲಿ ಮಣಿಪುರ ಇವರ ಅಧ್ಯಕ್ಷತೆಯಲ್ಲಿ ದುವಾ ಗೈದರು.  ಡಿವಿಷನ್ ಮಾಜಿ ಅಧ್ಯಕ್ಷರಾದ ಸೈಯ್ಯದ್ ಯೂಸುಫ್ ನವಾಝ್ ತಂಙಲ್ ಹೂಡೆ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಡಿವಿಷನ್ ಕೋಶಾಧಿಕಾರಿ ಇಬ್ರಾಹಿಂ ರಂಗನಕೆರೆ, ಜಿಲ್ಲಾ ನಾಯಕರಾದ ನಝೀರ ಸಾಸ್ತಾನ, ಡಿವಿಷನ್ ಸಿಸಿ ಕನ್ವೀನರ್ ಮಜೀದ್ ಕಟಪಾಡಿ, ಹೆಲ್ಪ್ ಡೆಸ್ಕ್ ಕನ್ವೀನರ್ ಸಿದ್ದೀಕ್ ಸಂತೋಷ್ ನಗರ, ಕ್ಯಾಂಪಸ್ ಕಾರ್ಯದರ್ಶಿ ಫವಾಝ್ ದೊಡ್ಡಣಗುಡ್ಡೆ, ಬಿಲಾಲ್ ಮಲ್ಪೆ, ಡಿವಿಷನ್ ನಾಯಕರಾದ ಶಂಶುದ್ದೀನ್ ಆರ್.ಕೆ, ಸೈಪ್ ಆಲಿ, ಇಮ್ತಿಯಾಝ್ ಹೊನ್ನಾಳ, ಅಲ್ತಾಫ್, ಕಯ್ಯೂಮ್ ಮಲ್ಪೆ,  ಇಮ್ತಿಯಾಝ್ ಸಂತೋಷ್ ನಗರ, ಮುತ್ತಲಿಬ್, ಸುಲೈಮಾನ್ ಆರ್.ಕೆ, ಮಣಿಪಾಲ ಸೆಕ್ಟರ್ ಅಧ್ಯಕ್ಷ ನವಾಝ್ ಉಡುಪಿ, ಅನ್ಸಾರ್ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು. 

ಡಿವಿಷನ್ ಪ್ರಧಾನ ಕಾರ್ಯದರ್ಶಿ ಶಿಹಾಬ್ ರಂಗನಕೆರೆ ಸ್ವಾಗತಿಸಿದರು. ನಾಸೀರ್ ಬಿಕೆ ವಂದಿಸಿದರು. 

Similar News