ರಾಜ್ಯದಲ್ಲಿ 72.67 ಶೇ. ಮತದಾನ: ಚಿಕ್ಕಬಳ್ಳಾಪುರದಲ್ಲಿ ಅತ್ಯಧಿಕ, ಬೆಂಗಳೂರು ದಕ್ಷಿಣದಲ್ಲಿ ಅತೀ ಕಡಿಮೆ

Update: 2023-06-27 10:59 GMT

ಬೆಂಗಳೂರು, ಮೇ 11: ಕರ್ನಾಟಕ ರಾಜ್ಯ ವಿಧಾನಸಭೆಗೆ ಬುಧವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 72.67 ಶೇ. ಮತದಾನವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ 85.83 ಶೇ. ಮತದಾನವಾಗಿದ್ದರೆ, ಬೆಂಗಳೂರು ದಕ್ಷಿಣದಲ್ಲಿ ಅತೀ ಕಡಿಮೆ ಅಂದರೆ 52.80 ಶೇ. ಮತದಾನವಾಗಿದೆ.

ಉಳಿದಂತೆ ರಾಮನಗರದಲ್ಲಿ 84.98 ಶೇ., ಮಂಡ್ಯದಲ್ಲಿ 84.36 ಶೇ., ಬೆಂಗಳೂರು ಗ್ರಾಮಾಂತರದಲ್ಲಿ 83.76 ಶೇ. ಮತದಾನವಾಗಿದ್ದರೆ, ಬೆಂಗಳೂರು ನಗರದಲ್ಲಿ 56.98 ಶೇ., ಬೆಂಗಳೂರು ಸೆಂಟ್ರಲ್ ನಲ್ಲಿ 55.39 ಶೇ. ಮತ ಚಲಾವಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 76.15 ಶೇ., ಉಡುಪಿ ಜಿಲ್ಲೆಯಲ್ಲಿ 78.46 ಶೇ. ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 76.72 ಶೇ. ಮತದಾನವಾಗಿದೆ.

ಇನ್ನೂ ಕಳೆದೆರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಒಂದಿಷ್ಟು ಜಾಸ್ತಿಯಾಗಿದೆ. 2018ರ ಚುನಾವಣೆಯಲ್ಲಿ 72.44 ಶೇ. ಮತದಾನವಾಗಿತ್ತು. ಅಂದರೆ ಈ ಸಲ ಇದಕ್ಕಿಂತ ಶೇ.0.23ರಷ್ಟು ಅಧಿಕ ಮತ ಚಲಾವಣೆಯಾಗಿದೆ. ಅದೇರೀತಿ 2013ರಲ್ಲಿ 71.83 ಶೇ. ಮತದಾನವಾಗಿತ್ತು.

ಹೆಚ್ಚಿನ ವಿವರಗಳು ಇಲ್ಲಿವೆ...

Similar News