ಶಿರ್ವ: ಪಂಪ್ ಸೆಟ್ ಕಳವು; ಪ್ರಕರಣ ದಾಖಲು

Update: 2023-01-04 17:06 GMT

ಶಿರ್ವ: ಜಾಗದಲ್ಲಿ ಅಳವಡಿಸಿದ್ದ ಪಂಪ್‌ಸೆಟ್ ಕಳವುಗೈದ ಬಗ್ಗೆ ಬೆಳಪುವಿನ ಡಾ. ಅಂಬೇಡ್ಕರ್ ರೋಡ್ ನಿವಾಸಿ ಕೆ. ಕೊರಗ ಎನ್ನುವರು ದೂರು ನೀಡಿದ್ದಾರೆ.

ಕೊರಗ ಇವರಿಗೆ ಸಂಬಂಧಿಸಿದ ಜಾಗದಲ್ಲಿ 2018ರಲ್ಲಿ ಕರ್ನಾಟಕ ಸರ್ಕಾರದ ಸಣ್ಣ ರೈತರ ಯೋಜನೆಯಡಿ ಸರ್ಕಾರದ ವತಿಯಿಂದ ಬಾವಿ ತೋಡಿಸಿ ಅದಕ್ಕೆ 3 ಹೆಚ್‌ಪಿ ಪಂಪ್ ಅಳವಡಿಸಲಾಗಿತ್ತು. ಈ ಬಾವಿಯ ಕುಡಿಯುವ ನೀರನ್ನು ಆಸುಪಾಸಿನ ಜನರು ಉಪಯೋಗಿಸುತ್ತಿದ್ದರು. 

ಆದರೆ ಇದೀಗ 5 ಸಾವಿರ ರೂ.ಮೌಲ್ಯದ ಪಂಪ್ ಅನ್ನು ಯಾರೋ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News