ಫೆ.24ರಿಂದ ಎಮ್ಮೆಮಾಡು ಉರೂಸ್

Update: 2023-02-21 17:38 GMT

ಮಂಗಳೂರು, ಫೆ.21; ಕೊಡಗು ಜಿಲ್ಲೆಯ ಪ್ರಸಿದ್ಧ ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ  ಹಝ್ರತ್ ಸೂಫಿ ಶಹೀದ್ (ರ)ಮತ್ತು ಸಯ್ಯಿದ್ ಹಸನ್ ಸಖಾಫಿ ಅಲ್ ಹಳ್ರಮಿ(ರ) ಹಾಗೂ ಇತರ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಫೆ. 24ರಿಂದ  ಮಾ.3ರ ತನಕ ನಡೆಯಲಿದೆ ಎಂದು ಎಮ್ಮೆಮಾಡು ಟಿಐಎಂಜೆ ಮಾಜಿ ಕಾರ್ಯದರ್ಶಿ ಇಬ್ರಾಹೀಂ ಸಅದಿ ಪಿ.ಎ. ಎಮ್ಮೆಮಾಡು ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದಿಗೋಷ್ಠಿಯಲ್ಲಿ  ಮಾತನಾಡಿ ಫೆ.24ರಂದು ಶುಕ್ರವಾರ ಜುಮಾ ನಮಾಝ್‌ನ ಬಳಿಕ ಮಖಾಂ ಝಿಯಾರತ್ ಮತ್ತು ಉರೂಸ್‌ನ ಉದ್ಘಾಟನೆ ನಡೆಯಲಿದ್ದು,  ನಾಯಿಬ್ ಖಾಝಿ ಕೊಡಗು ಶಾದುಲ್ ಫೈಝಿ ಅಧ್ಯಕ್ಷತೆಯಲ್ಲಿ ಕೋಝಿಕ್ಕೊಡ್ ಖಾಝಿ ಸಯ್ಯಿದ್ ಮುಹಮ್ಮದ್ ಕೋಯ ಜಮುಲುಲ್ಲೈಲಿ ತಂಳ್ ಉದ್ಘಾಟನೆ ನೆರವೇರಿಸಲಿರುವರು.  ಎಮ್ಮೆಮಾಡು ಖತೀಬ್ ಅಸ್ನವಿ ಮುಹ್ಸಿನ್ ಹುದವಿ ಪ್ರವಚನ ನೀಡಲಿರುವರು ಎಂದು ಮಾಹಿತಿ ನೀಡಿದರು.

ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ರಾತ್ರಿ 8 ಗಂಟೆಗೆ  ಶಾಫಿ ಸಖಾಫಿ ಮುಂಡಂಬ್ರ ಪ್ರವಚನ ನೀಡಲಿರುವರು. ಫೆ.25ರಂದು ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ಅಲ್ ಬುಖಾರಿ (ಬಾಯಾರ್ ತಂಙಳ್) ನೇತೃತ್ವದಲ್ಲಿ ದ್ಸಿಕ್‌ರ್ ಹಲ್ಖಾ ಕಾರ್ಯಕ್ರಮ ನಡೆಯಲಿದೆ.

ಇಬ್ರಾಹೀಂ ಖಲೀಲ್ ಹುದವಿ ಕಾಸರಗೋಡು ಪ್ರವಚನ ನೀಡಲಿದ್ದಾರೆ. ಫೆ.26ರಂದು ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ನೇತೃತ್ವದಲ್ಲಿ ಮಗ್ರೀಬ್ ನಮಾಝ್‌ನ ನಂತರ ಖತಂ ದುಆ ಮಜ್ಲಿಸ್ ನಡೆಯಲಿದ್ದು, ಸೌಫಲ್ ಸಖಾಫಿ ಕಳಸ ಪ್ರವಚನ ನೀಡಲಿರುವರು. ಫೆ.27ರಂದು ಟಿಐಎಂಜೆ ಎಮ್ಮೆಮಾಡು ಇದರ ಅಧ್ಯಕ್ಷ ಪಿ.ಎ.ಅಬೂಬಕರ್ ಸಖಾಫಿ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮ್ಮೇಳನ  ನಡೆಯಲಿದೆ. ಸಯ್ಯಿದ್ ಆಟಕೋಯ ತಂಳ್ ಕುಂಬೋಲ್, ಮೌಲಾನ ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಮೌಲಾನ ಶಾಫಿ ಸಹದಿ, ಶಾಸಕ ಕೆ.ಜಿ. ಬೋಪಯ್ಯ ಭಾಗವಹಿಸಲಿದ್ದಾರೆ.ಸಂಜೆ 4ರಿಂದ 6 ತನಕ ಅನ್ನದಾನ ನಡೆಯಲಿದೆ.

ಫೆ.2ರಂದು ರಾತ್ರಿ ಡಾ. ಬಶೀರ್ ಫೈಝಿ ದೇಶಮಂಗಲಂ, ಫೆ.28ರಂದು ಆಶಿಕ್ ದಾರಿಮಿ ಆಲಪ್ಪುಝ, ಮಾ.1ರಂದು ಹಾಫಿಝ್ ಜುನೈದ್ ಜೌಹರಿ ಕೊಲ್ಲಂ ಪ್ರವಚನ ನೀಡಲಿರುವರು.

ಮಾ.2ರಂದು ಅಬ್ದುಸ್ಸಲಾಂ ಶಾಮಿಲ್ ಇರ್ಫಾನಿ ಕಾಮಿಲ್ ಸಖಾಫಿ ಚೆಯ್ಯೂರ್ ನೇತೃತ್ವದಲ್ಲಿ  ಸ್ವಲಾತುನ್ನಾರಿಯ ಮಜ್ಲಿಸ್ ನಡೆಯಲಿದ್ದು, ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ ಪ್ರವಚನ ನೀಡುವರು.

ಮಾ.3ರಂದು ಸಮಾರೋಪ ಸಮಾರಂಭ ನಡೆಯಲಿದೆ. ಬದ್ರುಸಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ ಕಡಲುಂಡಿ ಉದ್ಘಾಟನೆ ನೆರವೇರಿಸುವರು. ಡಾ.ಅಬ್ದುಲ್ ಹಕೀಂ ಅಝ್ಹರಿ ಕಾಂತಪುರಂ ಮುಖ್ಯ ಪ್ರವಚನ ನೀಡಲಿರುವರು ಎಂದು ಇಬ್ರಾಹಿಂ ಸಅದಿ ಪಿ.ಎ. ಎಮ್ಮೆಮಾಡು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟಿಐಎಂಜೆ  ಸದಸ್ಯ ಮೂಸ ಕಂಬೇರ, ಮುಹಮ್ಮದ್ ಅಲಿ ಕೆ.ಎ ಉಪಸ್ಥಿತರಿದ್ದರು.

Similar News