ಶುದ್ಧ ಕುಡಿಯುವ ನೀರಿಗೆ ಆಗ್ರಹಿಸಿದ ವಿದ್ಯಾರ್ಥಿಗಳನ್ನು ದಿಗ್ಬಂಧನದಲ್ಲಿರಿಸಿದ ಪ್ರಾಂಶುಪಾಲೆಯನ್ನು ವಜಾಗೊಳಿದ ಸರ್ಕಾರ

Update: 2023-02-24 11:06 GMT

ಕಾಸರಗೋಡು: ಕಾಲೇಜಿನಲ್ಲಿ ಕಲುಷಿತ ಕುಡಿಯುವ ನೀರಿನ ಬಗ್ಗೆ ದೂರಿದ ಕೆಲ ವಿದ್ಯಾರ್ಥಿಗಳನ್ನು ತಮ್ಮ ಚೇಂಬರಿನಲ್ಲಿ ದಿಗ್ಬಂಧನದಲ್ಲಿರಿಸಿದ್ದರೆನ್ನಲಾದ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಂಶುಪಾಲೆ ಎನ್‌ ರೇಮಾ ಅವರನ್ನು ಹುದ್ದೆಯಿಂದ ಕೈಬಿಡಲಾಗಿದೆ. ಘಟನೆ ಫೆಬ್ರವರಿ 23, ಗುರುವಾರದಂದು ನಡೆದಿದೆ. ಘಟನೆ ಬಗ್ಗೆ ದೂರು ದೊರೆತ ಬೆನ್ನಲ್ಲೇ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಡಾ ಆರ್‌ ಬಿಂದು ಪ್ರಾಂಶುಪಾಲೆಯನ್ನು ಹುದ್ದೆಯಿಂದ ಕೈಬಿಡುವ ಆದೇಶವನ್ನು ಹೊರಡಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ರೇಮಾ ಅವರ ಸ್ಥಾನಕ್ಕೆ ಕಾಲೇಜಿನ ಭೂಗರ್ಭ ಶಾಸ್ತ್ರ ವಿಭಾಗದ ಪ್ರೊ. ಎಎಲ್‌ ಅನಂತಪದ್ಮನಾಭನ್‌ ಅವರನ್ನು ಹಂಗಾಮಿ ಪ್ರಾಂಶುಪಾಲರನ್ನಾಗಿ ನೇಮಿಸಲಾಗಿದೆ. ಈ ಕುರಿತು ಸಚಿವೆ ಬಿಂದು ಫೇಸ್ಬುಕ್‌ ಪೋಸ್ಟ್‌ ಒಂದರಲ್ಲಿ ಮಾಹಿತಿ ನೀಡಿದ್ದಾರೆ.

ಕಾಲೇಜಿನ ಕ್ಯಾಂಪಸ್ಸಿನಲ್ಲಿ ಲಭ್ಯವಿರುವ ಕುಡಿಯುವ ನೀರು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು  ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆಗ ಶುದ್ಧ ಕುಡಿಯುವ ನೀರು ಆಗ್ರಹಿಸಿ ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಕೆಲ ವಿದ್ಯಾರ್ಥಿಗಳು ಪ್ರಾಂಶುಪಾಲೆಯ ಚೇಂಬರಿಗೆ ಆಗಮಿಸಿದರಲ್ಲದೆ ಕ್ರಮಕೈಗೊಳ್ಳುವ ತನಕ ಅಲ್ಲಿಂದ ಕದಲುವುದಿಲ್ಲವೆಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ಪ್ರಾಂಶುಪಾಲೆ ಎನ್‌ ರೇಮಾ ಅವರು ವಿದ್ಯಾರ್ಥಿಗಳನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ದಿಗ್ಬಂಧನದಲ್ಲಿರಿಸಿದ್ದರೆಂದು ಆರೋಪಿಸಲಾಗಿದೆ.

ಇದನ್ನೂ ಓದಿ: ವಿಶ್ವಬ್ಯಾಂಕ್ ನ ಸಾರಥ್ಯ ವಹಿಸಲು‌ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನಾಮಕರಣ ಮಾಡಿದ ಅಜಯ್ ಬಂಗಾ ಯಾರು ಗೊತ್ತೇ?

Similar News