ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಗತಿ ಪರಿಶೀಲನಾ ಕಾರ್ಯಕ್ರಮ
ದೇರಳಕಟ್ಟೆ: ರೇಂಜ್ ಜಂಇಯ್ಯತುಲ್ ಮುವಲ್ಲಿಮೀನ್ ಇದರ ವತಿಯಿಂದ ಪ್ರಗತಿ ಪರಿಶೀಲನೆ ಕಾರ್ಯಕ್ರಮ ರವಿವಾರ ಮಧ್ಯಾಹ್ನ ಮಿಸ್ಬಾಹುಲ್ ಉಳೂಂ ಬರುವ ಮದರಸದಲ್ಲಿ ದೇರಳಕಟ್ಟೆ ರೇಂಜ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಫೈಝಿಯವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಂಜ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಫೈಝಿ ವಹಿಸಿದ್ದರು. ನಂತರ ದೇರಳಕಟ್ಟೆ ರೇಂಜ್ ಪರೀಕ್ಷಾ ಬೋರ್ಡ್ ಚೇರ್ಮನ್ ಅಬ್ದುಲ್ ರಹ್ಮಾನ್ ಫೈಝಿ ಗ್ರಾಮಚಾವಡಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಬ್ದುಲ್ ರಹಮಾನ್ ಫೈಝಿ ನಿರ್ವಹಿಸಿದರು.
ಹನೀಫ್ ಮುಸ್ಲಿಯಾರ್ ಬೋಳಂತೂರು ಹಾಗೂ ಉಮರ್ ದಾರಿಮಿ ಸಾಲ್ಮರರವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ನಡೆಯಿತು.
ನಂತರ ಪ್ರಗತಿ ಪರಿಶೀಲನೆಯ ತೀರ್ಪು ನೀಡಿ ಮಾತನಾಡಿದ ಉಮರ್ ದಾರಿಮಿ ಸಾಲ್ಮರ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳನ್ನು ಅಧ್ಯಾಪಕರನ್ನು ಅಭಿನಂದಿಸಿದರು. ಅತ್ಯಧಿಕ ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ ಶಂಸುಲ್ ಉಲಮಾ ಬದಿಯಾರ್ ಮದ್ರಸ ವಿಧ್ಯಾರ್ಥಿನಿ ಫಾತಿಮತ್ ಸಅದಿಯ ಎಂಬ ವಿದ್ಯಾರ್ಥಿನಿಗೆ ನಗದು ಮತ್ತು ಆಕರ್ಷಕ ಫಲಕ, ದ್ವಿತೀಯ ಸ್ಥಾನ ಪಡೆದ ನೂರುಲ್ ಉಳೂಂ ಶಾಂತಿ ಬಾಗ್ ಮದ್ರಸ ವಿಧ್ಯಾರ್ಥಿ ಮೊಹಮ್ಮದ್ ಸೈಫುಲ್ಲಾಗೆ ನಗದು ಮತ್ತು ಆಕರ್ಷಕ ಫಲಕ ತೃತೀಯ ಸ್ಥಾನ ಪಡೆದ ಅಲ್ ಅಖ್ಸಾ ಗ್ರಾಮ ಚಾವಡಿ ಮದ್ರಸ ಅಫ್ರಾನ್ ನಗದು ಮತ್ತು ಆಕರ್ಷಕ ಫಲಕ ನೀಡಿ ಗೌರವಿಸಲಾಯಿತು.
13 ಮದರಸಗಳಿಂದ ಭಾಗವಹಿಸಿದ ವಿದ್ಯಾರ್ಥಿಗಳಿಗೂ ಆಕರ್ಷಕ ಫಲಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಇರ್ಫಾನ್ ಅಸ್ಲಮಿ ನಿರೂಪಿಸಿದರು. sksbv ಚೇರ್ಮನ್ ಇಸ್ಹಾಕ್ ಫೈಝಿ sksbv ಸರ್ಟಿಫಿಕೇಟ್ ವಿತರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್ ತಪಾಸಣೆಗಾರ ಹನೀಫ್ ಮುಸ್ಲಿ ಯಾರ್ ಬೋಳಂತೂರು ಕಾರ್ಯಕ್ರಮದ ಯಶಸ್ವಿಗೆ ಮತ್ತು ಸಹಾಯ ನೀಡಿ ಸಹಕರಿಸಿದ ಅಧ್ಯಾಪಕರಿಗೆ ಹಾಗೂ ಬರುವ ಮದರಸ ಮಸೀದಿ ಮ್ಯಾನೇಜ್ಮೆಂಟ್ ಪ್ರತಿನಿಧಿಗಳಿಗೂ ಪ್ರಾರ್ಥನೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕಣ್ಣಿಯತ್ತ್ ಉಸ್ತಾದ್ ರಿಲೀಫ್ ಕನ್ವೀನರ್ ಇಬ್ರಾಹಿಂ ಫೈಝಿ ಬದಿಯಾರ್ ಕೋಆರ್ಡಿನೇಟರ್ ಅಬ್ದುಲ್ ರಝಾಕ್ ದಾರಿಮಿ ಬರುವ ಕುರುನ್ನುಗಲ್ ದಿಸ್ಟ್ರಿಬೂಟರ್ ನೌಶಾದ್ ಫೈಝಿ ಮಜಲ್ ತೋಟ ಹಾಗೂ ಮದರಸ ಮುಖ್ಯೋಪಾಧ್ಯಾಯರು ಅಧ್ಯಾಪಕರು ಬರುವ ಮಸೀದಿ ಮದರಸ ಅಧ್ಯಕ್ಷರು ಹಾಗೂ ಮ್ಯಾನೇಜ್ಮೆಂಟ್ ಪ್ರತಿನಿಧಿಗಳು ಭಾಗವಹಿಸಿದ್ದರು.
ದೇರಳಕಟ್ಟೆ ರೇಂಜ್ ಜೊತೆ ಕಾರ್ಯದರ್ಶಿ ಮುಸ್ತಫ ಫೈಝಿ ಎಲಿಯಾರ್ ವಂದಿಸಿದರು.