ಬೆಂಗಳೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ರಕ್ಷಣೆ ಮಾಡಿದ ಪೊಲೀಸರು

Update: 2023-03-01 13:40 GMT

ಬೆಂಗಳೂರು, ಮಾ.1: ಕ್ರಿಮಿ ಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಗಸ್ತಿನಲ್ಲಿದ್ದ ಮೂವರು ಹೊಯ್ಸಳ ಪೊಲೀಸರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಫೆ.26ರಂದು ಪುಲಕೇಶಿನಗರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಾರಣಕ್ಕೆ ಮನನೊಂದು ಮಹಿಳೆ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕ್ರಿಮಿ ನಾಶಕ ಕುಡಿದ ಹಿನ್ನೆಲೆ ನೋವು ತಾಳಲಾರದೇ ಕಿರುಚಾಡಿದ್ದಾರೆ. ಆಗ ಸ್ಥಳೀಯರೊಬ್ಬರು ಮಹಿಳೆಯಿದ್ದ ಮನೆಗೆ ಹೋಗಲು ಯತ್ನಿಸಿದ್ದಾರೆ. ಆದರೆ ಬಾಗಿಲು ಒಳಗಡೆಯಿಂದ ಬಂದ್ ಆದ ಹಿನ್ನೆಲೆ ಸಾಧ್ಯವಾಗಿಲ್ಲ. ಬಳಿಕ ಪೊಲೀಸರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ

ಸಂದರ್ಭಕ್ಕೆ ಸ್ಪಂದಿಸಿದ ಪುಲಿಕೇಶಿನಗರ ಠಾಣಾ ಪೊಲೀಸರು ತಕ್ಷಣ ಹೊಯ್ಸಳ ಗಸ್ತು ವಾಹನ ಸಿಬ್ಬಂದಿಗೆ ಸಂದೇಶ ರವಾನಿಸಿದ್ದು, ವಿಚಾರ ತಿಳಿದ ಕೆಲವೇ ನಿಮಿಷದಲ್ಲಿ ಪೊಲೀಸರಿಂದ ಮಹಿಳೆ ರಕ್ಷಣೆ ಮಾಡಿದ್ದಾರೆ. ಸದ್ಯ ಸಿಬ್ಬಂದಿಗಳ ಕಾರ್ಯವೈಕರಿಗೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Similar News