ಮಲ್ನಾಡ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ ವತಿಯಿಂದ ಕ್ರಿಕೆಟ್ ಪಂದ್ಯಾಟ

ʼಮಲ್ನಾಡ್ ಕಪ್ -2023ʼ

Update: 2023-03-01 18:42 GMT

ದಮಾಮ್:‌ ಮಲೆನಾಡು ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ಅನಿವಾಸಿ ಭಾರತೀಯರ ಸಹಕಾರದಿಂದ ಸಂಘಟಿಸಿರುವ ಮಲ್ನಾಡ್ ಗಲ್ಫ್ ಚಾರಿಟೇಬಲ್ ಆ್ಯಂಡ್ ಎಜುಕೇಷನಲ್ ಟ್ರಸ್ಟ್ & ಮಲ್ನಾಡ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ ದಮಾಮ್-ಖೋಬರ್ ಘಟಕದ ವತಿಯಿಂದ ಆಯೋಜಿಸಿದ ʼಮಲ್ನಾಡ್ ಕಪ್ʼ ಸೀಝನ್ - 1 ಕ್ರಿಕೆಟ್  ಪಂದ್ಯಾಟ ದಮಾಮ್‌ನ ಗುಕ ಫ್ಲಡ್ ಲೈಟ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಈ ಪಂದ್ಯಾಟವನ್ನು ಪ್ರಾಯೋಜಕರಲ್ಲೊಬ್ಬರಾದ ಮಾಜಿದ್ ಅಡ್ವರ್ಟಿಸ್ ಕಂಪನಿ ಮಾಲಕರಾದ ಅನ್ವರ್ ಜಮಾದಾರ್, ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ಶರೀಫ್ ಕಳಸ ಜಂಟಿಯಾಗಿ ಉದ್ಘಾಟಿಸಿದರು.

ಇವರೊಂದಿಗೆ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಜಯಪುರ, ದಮಾಮ್ ಘಟಕದ ಅಧ್ಯಕ್ಷರಾದ ಬಷೀರ್ ಬಾಳುಪೇಟೆ, ಕೇಂದ್ರ ಸಮಿತಿಯ ಹಿರಿಯ ಸಲಹೆಗಾರರಾದ ಫಾರೂಕ್ ಅರಬ್ ಎನರ್ಜಿ, ಕಾರ್ಯದರ್ಶಿ ಅಸ್ಗರ್ ತಲಗೂರು ಉಪಸ್ಥಿತರಿದ್ದರು. ದಮಾಮ್-ಖೋಬರ್ ಘಟಕದ ಗೌರವಾಧ್ಯಕ್ಷರಾದ ಇಕ್ಬಾಲ್ ಬಾಳೆಹೊನ್ನೂರು ಅವರು ಎಲ್ಲಾ ಸದಸ್ಯರಿಗೆ ಗುರುತಿನ ಕಾರ್ಡ್ ನೀಡಿದರು.

ಸುಮಾರು ಹನ್ನೆರೆಡು ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ಗುಖಾ ದಮಾಮ್ ಪ್ರಥಮ ಸ್ಥಾನವನ್ನು, ಟೀಮ್ ಭಸ್ಮ ವಾರಿಯರ್ಸ್ ರನ್ನರ್ಸ್ ಅಪ್ ಸ್ಥಾನ ಗಳಿಸಿತು.

ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮರಾಗಿ ಸಲ್ಮಾನ್ ಗುಕಾ, ಬೆಸ್ಟ್ ಬ್ಯಾಟರ್ ಆಗಿ ಕೃಣಾಲ್ ಗುಖಾ, ಬೆಸ್ಟ್ ಬೌಲರ್ ಆಗಿ ಶೇಕ್ ಗುಖಾ, ಉತ್ತಮ ಕೀಪರ್ ಆಗಿ ಸವಾದ್ ಕರಾವಳಿ ಕ್ರಿಕೆಟರ್ಸ್, ಸರಣಿ ಪುರುಷೋತ್ತಮರಾಗಿ ರಶೀದ್ ಭಸ್ಮ ವಾರಿಯರ್ಸ್ ಆಯ್ಕೆಯಾದರು.

ಸಮಾರೋಪ ಸಮಾರಂಭದ ಆಕರ್ಷಣೆಯಾಗಿ ಫೈನಲ್ ಪಂದ್ಯದ ಮುಂಚಿತವಾಗಿ ಹಗ್ಗ ಜಗ್ಗಾಟ ಏರ್ಪಡಿಸಲಾಗಿತ್ತು. ಬಲಿಷ್ಠ ಏಳು ತಂಡಗಳು ಪರಸ್ಪರ ಸೆಣಸಾಡಿ ಕೊನೆಗೆ ಭಸ್ಮ ವಾರಿಯರ್ಸ್ ದಮಾಮ್ ವಿನ್ನರ್ಸ್ ಮತ್ತು ಕ್ಲೌಡ್ ಸೆವೆನ್ ದಮಾಮ್ ತಂಡ ರನ್ನರ್ಸ್ ಸ್ಥಾನ  ಪಡೆದುಕೊಂಡಿತು.

ಸಮಾರೋಪ ಸಮಾರಂಭವು ರಿದಾ ಫಾತಿಮಾ ಅವರ ಕಿರಾಅತ್  ನೊಂದಿಗೆ ಪ್ರಾರಂಭಿಸಲಾಯಿತು. ಕೇಂದ್ರ ಸಮಿತಿಯ ಅಧ್ಯಕ್ಷ ಮತ್ತು ಇವೆಂಟ್ ಕಮಿಟಿಯ ಚೇರ್ಮನ್ ಅಬ್ದುಲ್ ಸತ್ತಾರ್ ಸ್ವಾಗತಿಸಿದರು.

ದಮಾಮ್ -ಖೋಬರ್ ಘಟಕದ ಅಧ್ಯಕ್ಷರಾದ ಬಶೀರ್ ಬಾಳುಪೇಟೆ ಅಧ್ಯಕ್ಷತೆ ವಹಿಸಿ, ಸಂಘಟನೆಯ ಗುರಿ ಮತ್ತು ಕಾರ್ಯ ಚಟುವಟಿಕೆಗಳ ವಿವರ ನೀಡಿ ಸಂಘಟನೆಯ ಮುಂದಿನ ಡ್ರೀಮ್ ಪ್ರಾಜೆಕ್ಟ್ ಅನ್ನು ಎಲ್ಸಿಡಿ ಪರದೆಯ ಮೂಲಕ ತೋರಿಸಿ, ಎಲ್ಲರ ಸಹಕಾರ ಕೋರಲಾಯಿತು.

ಮುಖ್ಯ ಅತಿಥಿಗಳಾಗಿ ನಜ್ಮತ್ ಸರ್ವಿಸಸ್ ಕಂಪನಿಯ ಮಾಲಕರಾದ ಅಮೀರ್ ಅಬ್ಬಾಸ್, ಜಾಮಿಲ್ ಕಂಪನಿಯ ಪ್ರಾಜೆಕ್ಟ್ ಡೈರೆಕ್ಟರ್ ಚಂದ್ರು ಬಿ.ಎನ್, ಮಾಜಿದ್  ಅದ್ವೆರ್ಟಿಸ್ ಕಂಪನಿಯ ಮಾಲಕರಾದ ಅನ್ವರ್ ಜಮಾದಾರ್, ಮಾಜಿದ್ ತಾಹಿರ್ ಅಲ್-ಅಬ್ಬಾದ್, ಹಸ್ಸನ್ ಅಲ್ ಬನ್ನಾಹ್, ಅರಬ್ ಎನರ್ಜಿ ಮಾಲಕರಾದ ಬದರ್ ಅಲ್ ಹಾಜ್ರಿ, ಕೇಂದ್ರ ಸಮಿತಿಯ ಮೀಡಿಯಾ ವಿಭಾಗದ ಹನೀಫ್ ಬಿಳಗುಳ, ಇವೆಂಟ್ ಸಮಿತಿಯ ಖಜಾಂಜಿ ಅಯಾಝ್ ಅಹ್ಮದ್, ಅಶ್ರಫ್ ಜೆವಿಸಿ, ರಿಯಾದ್ ಘಟಕದ ಅಧ್ಯಕ್ಷರಾದ ನಝೀರ್ ಜಯಪುರ, ಜುಬೈಲ್ ಘಟಕದ ಅಧ್ಯಕ್ಷರಾದ ಅಬೂಬಕ್ಕರ್ ಹಂಡುಗೋಳಿ, ದಮಾಮ್ ಸಮಿತಿಯ ಉಪಾಧ್ಯಕ್ಷರಾದ ಅಫ್ಝಲ್ ಸಮದ್ ಕೊಪ್ಪ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಚಕ್ಕಮಕ್ಕಿ, ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಮೊಹಮ್ಮದ್ ರಾಫಿ, ಮೆಡಿಕಲ್ ವಿಭಾಗದ ಮುಖ್ಯಸ್ಥರಾದ ಜುನೈದ್ ಚಕ್ಕಮಕ್ಕಿ, ಹಿರಿಯ ಸಲಹೆಗಾರರಾದ ಸಿರಾಜ್ ಚಕ್ಕಮ್ಮಕ್ಕಿ, ಸಾಹಿಲ್ ಕಾರ್ಕಳ ಕ್ಲೌಡ್ 7, ಶಫೀಕ್ ಕೂರ್ಗ್, ದರ್ವಿಶ್ ಬಾಳೆಹೊನ್ನೂರು, ಝಕೀರ್ ಹರಿಹರಪುರ ಭಾಗವಹಿಸಿದ್ದರು.

ಪಂದ್ಯಾಟ ವೀಕ್ಷಿಸಲು ದಮಾಮ್- ಖೋಬರ್ ಸದಸ್ಯರು, ರಿಯಾದ್ ಮತ್ತು ಜುಬೈಲ್ ಘಟಕದ ಸದಸ್ಯರುಗಳು ಭಾಗವಿಹಿಸಿ ಪ್ರೋತ್ಸಾಹಿಸಿದರು.

ಮುಖ್ಯ ವೀಕ್ಷಕ ವಿವರಣೆಗಾರರಾಗಿ ಸೌದಿ ಅರೇಬಿಯಾದ್ಯಂತ ಖ್ಯಾತಿಗಳಿಸಿರುವ ಸಫ್ವಾನ್ ಬಜ್ಪೆ, ಇಬ್ರಾಹಿಂ ತೆಂಗಿನಮನೆ, ಝಮೀರ್ ಕುಂಜತ್ತೂರು, ಸ್ಕೋರರ್ ಆಗಿ ಮೊಹ್ಸಿನ್ ಕೂರ್ಗ್ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಎಂ.ಜಿ.ಟಿಯ ಬೆನ್ನೆಲುಬಾಗಿ ಎಲ್ಲಾ ಡಿಸೈನ್ ಎಡಿಟಿಂಗ್ ಮಾಡುವ ಅಂಥೋನಿ ಫುರ್ಟಾಡೋ (ಸ್ಟ್ಯಾನಿ)ರವರನ್ನೂ, ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ ಶಾಫಿ ಕ್ಯಾಲಿಕಟ್ ರನ್ನು ಸನ್ಮಾನಿಸಲಾಯಿತು. ಮೊಹಮ್ಮದ್ ಶಫಿವುಲ್ಲಾ ಚಿಕ್ಕಮಗಳೂರು ಕಾರ್ಯಕ್ರಮ ನಿರ್ವಹಿಸಿ ನಂತರ ವಂದಿಸಿದರು.

Similar News