ಮಂಗಳೂರು: ಬ್ಯಾರಿ ಮೇಳದಲ್ಲಿ ಗಮನಸೆಳೆದ ಬ್ಯಾರಿ ಕಲಾ ರಂಗದ ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ಆಶ್ರಯದಲ್ಲಿ ಕಳೆದ ಮೂರು ದಿನಗಳಿಂದ ಯಶಸ್ವಿಯಾಗಿ ಸಂಪನ್ನಗೊಂಡ ಬ್ಯಾರಿ ಮೇಳದಲ್ಲಿ ಬ್ಯಾರಿ ಕಲಾ ರಂಗದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಖಾಲಿದ್ ಉಜಿರೆ ಯವರ ರಾಜಕುಮಾರ್ ಧ್ವನಿಯಲ್ಲಿ ಮೂಡಿಬಂದ ಗಾಯನ ಮತ್ತು ಭಾವಾಭಿನಯ ಪ್ರೇಕ್ಷಕರ ಮನ ಮೆಚ್ಚಿತು. ಅಜೀಜ್ ಬೈಕಂಪಾಡಿ ಯವರ ನಿರ್ದೇಶನ ದಲ್ಲಿ ಓದಿ ಬಾನಿಯ ಮತ್ತು ಕುದಿಕೆರೋ ಮಂಗಿಲ ನಾಟಕಗಳು ಪ್ರದರ್ಶನಗೊಂಡವು. ಹಿಮ್ಮೇಳದಲ್ಲಿ ಹುಸೈನ್ ಕಾಟಿಪಳ್ಳ ಹಾಗೂ ಸತೀಶ್ ಸುರತ್ಕಲ್ ಸಹಕರಿಸಿದ್ದರು. ಬಹುಭಾಷಾ ಸಂಗೀತೋತ್ಸವವೂ ನಡೆಯಿತು. ಬಿಸಿಸಿಐ ಅಧ್ಯಕ್ಷರಾದ ಎಸ್.ಎಂ.ರಶೀದ್ ಹಾಜಿ ಹಾಗೂ ತಂಡದ ಸದಸ್ಯರು ಕಲಾವಿದರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗೌರವ ಸಲ್ಲಿಸಿದರು.
ನೂರಾರು ವ್ಯಾಪಾರ ಮಳಿಗೆಗಳನ್ನು ತೆರೆದು ಸೇವೆಗೈದ ಮಾಲೀಕರು, ಕಾರ್ಯಕ್ರಮ ನಿರ್ವಹಣೆ ಮಾಡಿದ ಸಾಹಿಲ್ ಜಹೀರ್, ರಫೀಕ್ ಮಾಸ್ಟರ್, ಜಾಹೀರಾತುದಾರರಿಗೂ, ವಿವಿಧ ವಿಚಾರಗೋಷ್ಠಿ ನಡೆಸಿಕೊಟ್ಟ ಮುಖ್ಯಸ್ಥರು, ಉದ್ಯೋಗ ಮೇಳ ನಡೆಸಿಕೊಟ್ಟ ವಿವಿಧ ಕಂಪೆನಿಗಳ ನಿರ್ದೇಶಕರು, ಮಹಿಳಾ ಉದ್ಯಮಿಗಳ ಸಮಾವೇಶ ನಿರ್ವಹಿಸಿದವರಿಗೂ, ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮದವರಿಗೆ ಹಾಗೂ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಬ್ಯಾರಿ ಮೇಳವನ್ನು ಯಶಸ್ವಿಗೊಳಿಸಿದ ಸರ್ವ ಧರ್ಮ ಬಂಧುಗಳಿಗೂ ಕೃತಜ್ಞತೆ ಸಲ್ಲಿಸಿದರು.