ಐಪಿಎಸ್ ಅಧಿಕಾರಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ: ದೂರು
Update: 2023-03-14 16:17 GMT
ಬೆಂಗಳೂರು, ಮಾ.14:ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ 2.5 ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಿವಾಸ್ ಎಂಬಾತ ಐಪಿಎಸ್ ಎಂದು ವಂಚಿಸಿದ ಆರೋಪಿ ಎಂದು ತಿಳಿದುಬಂದಿದೆ. ಈತ ತಾನು ಮೈಸೂರಿನಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿ, ಮೈಸೂರಿನ ಭೂಮಿ ವ್ಯವಹಾರದಲ್ಲಿ 450ಕೋಟಿ ವ್ಯವಹಾರ ಇದೆ ಅದು ಹೇಳಿಕೊಂಡು ಹಂತ ಹಂತವಾಗಿ ವ್ಯಕ್ತಿಯೊಬ್ಬರಿಂದ 2.5 ಕೋಟಿ ರೂ ಪಡೆದು ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಇನ್ನೂ, ತಾನು ಪ್ರೊಬೇಷನರಿ ಎಸ್ಪಿ ಎಂದು ಕೆಲ ಪೊಲೀಸ್ ಠಾಣೆಗಳಿಗೂ ಸಮವಸ್ತ್ರದಲ್ಲೇ ಆರೋಪಿ ಹೋಗಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಘಟನೆ ಕುರಿತು ತಲಘಟ್ಟಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.