ಬೆಂಗಳೂರು | ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದಕ್ಕೆ ​ಮನೆ ಆವರಣ ಗೋಡೆ​ ಧ್ವಂಸ: ಆರೋಪ

Update: 2023-03-19 16:06 GMT

ಬೆಂಗಳೂರು, ಮಾ.19: ಚುನಾವಣೆ ಸಮೀಪದಲ್ಲಿಯೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದಕ್ಕೆ ವ್ಯಕ್ತಿಯೊಬ್ಬರ ಮನೆಯ ತಡೆಗೋಡೆಯನ್ನೆ ಜೆಸಿಬಿ ಮೂಲಕ ಧ್ವಂಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಬಿಜೆಪಿ ನಾಯಕನ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದ್ದು, ನವೀನ್ ಎಂಬುವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದರಿಂದ ಕೋಪಗೊಂಡ ಮಾಚೋಹಳ್ಳಿ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮೇಶ್, ಜೆಸಿಬಿ ಮೂಲಕ ನವೀನ್ ಅವರಮನೆಯ ತಡೆಗೋಡೆ ಒಡೆದುಹಾಕಿದ್ದಾರೆ.

ಅಷ್ಟೇ ಅಲ್ಲದೆ, ಈ ವೇಳೆ ನವೀನ್ ತಾಯಿ ರಂಗಮ್ಮ ಪ್ರಶ್ನಿಸಿದ್ದಕ್ಕೆ ಬಿಜೆಪಿ ಮುಖಂಡ ಉಮೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ಕುರಿತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈಲ್ ಆಗಿದೆ. ಅದು ಅಲ್ಲದೆ, ನವೀನ್ ಮೂರು ದಿನಗಳ ಹಿಂದೆ ತಡೆಗೋಡೆ ನಿರ್ಮಿಸಿದ್ದರು.

ಇದೀಗ ಉದ್ದೇಶ ಪೂರಕವಾಗಿಯೇ ನೆಲ ಸಮ ಮಾಡಲಾಗಿದ್ದು, ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News