ಪೌರರಕ್ಷಣಾ ಸದಸ್ಯರ ನೇಮಕಾತಿ: ಅರ್ಜಿ ಆಹ್ವಾನ
Update: 2023-03-23 21:38 IST
ಉಡುಪಿ, ಮಾ.23: ಜಿಲ್ಲಾ ಪೌರ ರಕ್ಷಣಾ ದಳ ಇಲಾಖೆಯಲ್ಲಿ ಪೌರ ರಕ್ಷಣಾ ಸದಸ್ಯರ ನೇಮಕಾತಿಗಾಗಿ 18 ವರ್ಷ ಮೇಲ್ಪಟ್ಟ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಬಳಿ ಇರುವ ಪೌರ ರಕ್ಷಣಾ ಕಚೇರಿ ದೂ.ಸಂಖ್ಯೆ: 0820-2533650 ಅಥವಾ ಮೊ.ನಂ: 9980030400 ಅನ್ನು ಸಂಪರ್ಕಿಸಬಹುದು ಎಂದು ಪೌರ ರಕ್ಷಣಾ ದಳದ ಕಮಾಂಡಿಂಗ್ ವಾರ್ಡನ್ ಸರ್ವಿಸ್ ಆಫೀಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.