ಭವ್ಯ ನರಸಿಂಹಮೂರ್ತಿಗೆ ಕೈ ತಪ್ಪಿದ ಟಿಕೆಟ್:‌ ಗಮನ ಸೆಳೆದ ಟ್ವೀಟ್‌

Update: 2023-03-27 14:10 GMT

ಬೆಂಗಳೂರು: ರಾಜಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಯುವನಾಯಕಿ ಭವ್ಯಾ ನರಸಿಂಹಮೂರ್ತಿ ಅವರಿಗೆ ಭಾರೀ ನಿರಾಸೆ ಆಗಿದೆ. ಸಿಎಎ-ಎನ್‌ಆರ್‌ಸಿ ಪ್ರತಿಭಟನೆ ವೇಳೆ ಏಕಾಂಗಿಯಾಗಿ ಮಾಧ್ಯಮಗಳನ್ನು, ಪೊಲೀಸರನ್ನು ಎದುರಿಸಿ ಮಾಡಿದ ಭಾಷಣದಿಂದ ರಾತ್ರೋರಾತ್ರಿ ರಾಜ್ಯದ ಗಮನ ಸೆಳೆದಿದ್ದ ಭವ್ಯ ನರಸಿಂಹಮೂರ್ತಿ ಅವರಿಗೆ ರಾಜ್ಯದ ವಿವಿಧ ಭಾಗದಲ್ಲೂ ಅಭಿಮಾನಿಗಳಿದ್ದು, ಕಾಂಗ್ರೆಸ್‌ ಭವ್ಯಾರಂತಹ ಯುವ ನಾಯಕರುಗಳಿಗೆ ಟಿಕೆಟ್‌ ನೀಡಬೇಕೆಂಬ ಆಗ್ರಹ ಕೇಳಿ ಬಂದಿತ್ತು. 

ಈ ನಡುವೆ, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರಿರುವ ಪುಟ್ಟಣ್ಣ ಅವರಿಗೆ ಟಿಕೆಟ್ ಅಂತಿಮಗೊಂಡಿದ್ದು, ಭವ್ಯಾ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಉಂಟಾಗಿದೆ. ಸಾಮಾಜಿಕ ಮಾಧ್ಯಮದಲ್ಲೂ ಈ ಬಗ್ಗೆ ಚರ್ಚೆಗಳು ಆರಂಭವಾಗಿದೆ. 

ಈ ನಡುವೆ ಭವ್ಯ ಅವರು ತಮ್ಮ ಅಭಿಮಾನಿಗಳಿಗಾಗಿ ಟ್ವೀಟ್‌ ಮಾಡಿದ್ದು, ನಾನು ನಿಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತೇನೆ, ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು ಎಂದಿದ್ದಾರೆ. 

''ನನ್ನ ಗುರುತನ್ನು ಮಾಡಿಕೊಳ್ಳಲು ನಾನು ಇಲ್ಲಿದ್ದೇನೆ. ಒಂದು ಹಿನ್ನೆಡೆ ನನ್ನನ್ನು ತಡೆಯುವುದಿಲ್ಲ, ನಿಮ್ಮ ಅಭಿಮಾನ ಹಾಗೂ ಕಾಳಜಿಯ ಮಾತುಗಳಿಗೆ ಧನ್ಯವಾದ, ನಾನು ನಿಮಗಾಗಿ ನಿಲ್ಲುತ್ತೇನೆ, ನಿಮಗಾಗಿ ಹೋರಾಡುತ್ತೇನೆ, ನಿವು ನನ್ನ ಮೇಲೆ ಇಟ್ಟ ನಂಬಿಕೆ ಉಳಿಸಲು ಕಷ್ಟಪಟ್ಟು ದುಡಿಯುತ್ತೇನೆ, ನೀವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತೇನೆ'' ಎಂದು ಭವ್ಯ ಟ್ವೀಟ್‌  ಮಾಡಿದ್ದಾರೆ. 

ಭವ್ಯಾಗೆ ಹಲವರು ಬೆಂಬಲ ಸೂಚಿಸಿದ್ದು, “ಇದು ಹಿನ್ನಡೆ ಅಲ್ಲ ಭವ್ಯ. ನಿಮ್ಮ ಪೂರ್ವಭಾವಿ ಪ್ರಭಾವ ಮತ್ತು ನಾಯಕತ್ವದ ಮೂಲಕ, ನೀವು ಬಹುತೇಕ ಅಲ್ಲಿದ್ದೀರಿ. 3-4 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಅದೊಂದು ಸಾಧನೆ. ಶೀಘ್ರದಲ್ಲೇ ವಿಧಾನಸಬೆಯಲ್ಲಿ ನಿಮ್ಮನ್ನು ನೋಡುತ್ತೇವೆ. ಭರವಸೆ ಕಳೆದುಕೊಳ್ಳಬೇಡಿ.” ಎಂದು ಪ್ರಸಾದ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

Full View

Similar News