ಸಾಲಿಗ್ರಾಮ ಪಟ್ಟಣ ಪಂಚಾಯತ್: ಅನಧಿಕೃತ ಬ್ಯಾನರ್‌ಗಳ ತೆರವಿಗೆ ಸೂಚನೆ

Update: 2023-03-27 13:54 GMT
ಸಾಲಿಗ್ರಾಮ ಪಟ್ಟಣ ಪಂಚಾಯತ್: ಅನಧಿಕೃತ ಬ್ಯಾನರ್‌ಗಳ ತೆರವಿಗೆ ಸೂಚನೆ
  • whatsapp icon

ಉಡುಪಿ, ಮಾ.27: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ರುವ ಎಲ್ಲಾ ಅನಧಿಕೃತ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಹಾಗೂ ಕಟೌಟ್‌ಗಳನ್ನು ಈ ಕೂಡಲೇ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಅನಧಿಕೃತ ಬ್ಯಾನರ್, ಇತ್ಯಾದಿಗಳನ್ನು ಪಟ್ಟಣ ಪಂಚಾಯತ್ ವತಿಯಿಂದ ಯಾವುದೇ ಸೂಚನೆ ನೀಡದೇ ತೆರವುಗೊಳಿಸಲಾಗುವುದು.

ಸಾರ್ವಜನಿಕರು ಬ್ಯಾನರ್ ಇತ್ಯಾದಿಗಳನ್ನು ಅಳವಡಿಸಲು ಅರ್ಜಿ ಸಲ್ಲಿಸುವಾಗ, ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್, ಕಟೌಟ್ ಅಳವಡಿಸುವ ಸ್ಥಳ, ಅವುಗಳನ್ನು ಅಳವಡಿಸುವ ದಿನಾಂಕ ಮತ್ತು ತೆರವುಗೊಳಿಸುವ ದಿನಾಂಕವನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗೆ ಪಟ್ಟಣ ಪಂಚಾಯತ್ ಕಚೇರಿಯನ್ನು ಸಂಪರ್ಕಿ ಸಬಹುದು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 

Similar News