ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
Update: 2023-03-27 16:05 GMT
ಬೆಂಗಳೂರು, ಮಾ.27: ರಾಜ್ಯ ಸರಕಾರವು ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಬಿಎಂಟಿಸಿ(ಸುರಕ್ಷತೆ ಮತ್ತು ವಿಚಕ್ಷಣ)ನಿರ್ದೇಶಕರಾಗಿದ್ದ ಜಿ.ರಾಧಿಕಾ ಅವರನ್ನು ಸಹಾಯಕ ಪೊಲೀಸ್ ಮಹಾನಿರೀಕ್ಷಕಿಯಾಗಿ ಹಾಗೂ ಸಿಐಡಿ ಎಸ್ಪಿಯಾಗಿದ್ದ ಡಾ.ಸುಮನ್ ಡಿ.ಪೆನ್ನೇಕರ್ ಅವರನ್ನು ಬೆಂಗಳೂರು ನಗರ ಸಂಚಾರ ಪಚ್ಚಿಮ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.