ಎ.1ರಿಂದ ತಲಪಾಡಿ, ಹೆಜಮಾಡಿ, ಗುಂಡ್ಮಿ ಟೋಲ್ ಗೇಟ್‌ಗಳಲ್ಲಿ ಶುಲ್ಕ ಹೆಚ್ಚಳ

Update: 2023-03-31 13:01 GMT

ಮಂಗಳೂರು: ತಲಪಾಡಿ, ಹೆಜಮಾಡಿ ಮತ್ತು ಗುಂಡ್ಮಿಯ ಮೂರು ಟೋಲ್ ಗೇಟ್‌ಗಳಲ್ಲಿ ಎ. 1 ರಿಂದ ಪರಿಷ್ಕೃತ ಶುಲ್ಕವನ್ನು ಹೆಚ್ಚಿಸಲಾಗುವುದು ಎಂದು ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.

ತಲಪಾಡಿ ಟೋಲ್:

ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳ ತಲಪಾಡಿ ಟೋಲ್ ಪ್ಲಾಝಾದ ಪರಿಷ್ಕೃತ ದರಗಳು ರೂ. 50 (ಒನ್-ವೇ) ಮತ್ತು ರೂ. 75 (ಅದೇ ದಿನ ಹಿಂದಿರುಗಿದರೆ). ಮಾಸಿಕ ಪಾಸ್ ಒಂದು ತಿಂಗಳಲ್ಲಿ ಗರಿಷ್ಠ 50 ಬಾರಿ 1720 ರೂ.

ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಒಂದು ಮಾರ್ಗದ ದರಗಳು ರೂ. 80 ಮತ್ತು ಅದೇ ದಿನ ಮರಳಿ ಬಂದರೆ ರೂ. 120. ಮಾಸಿಕ ಪಾಸ್ ರೂ. 2655. ಬಸ್‌ಗಳು ಮತ್ತು ಟ್ರಕ್‌ಗಳಿಗೆ ರೂ. 165 ಮತ್ತು ಅದೇ ದಿನ ಮರಳಿ ಬಂದರೆ ರೂ. ರೂ 245 ಮಾಸಿಕ ಪಾಸ್ ಬೆಲೆ ರೂ 5420.

ಬಹು ಆಕ್ಸಲ್ ಮತ್ತು ಬೃಹತ್ ನಿರ್ಮಾಣ ಯಂತ್ರೋಪಕರಣಗಳನ್ನು ಹೊಂದಿರುವ ಭಾರೀ ವಾಹನಗಳಿಗೆ ಏಕಮುಖ ಸಂಚಾರ ರೂ. 250 ಮತ್ತು ದ್ವಿಮುಖಕ್ಕೆ ರೂ 370 ವೆಚ್ಚವಾಗುತ್ತದೆ. ಮಾಸಿಕ ಪಾಸ್‌ನ ಬೆಲೆ 8250 ರೂ. ಭಾರೀ ಗಾತ್ರದ ವಾಹನಗಳಿಗೆ ಏಕಮುಖ ಸಂಚಾರ ಶುಲ್ಕಗಳು ರೂ. 320 ಮತ್ತು ಅದೇ ದಿನ ಮರಳಿ ಬಂದರೆ ರೂ. 480 ಮತ್ತು ಮಾಸಿಕ ಪಾಸ್ ರೂ. 10625 ಆಗಿರುತ್ತದೆ.

ಹೆಜಮಾಡಿ ಟೋಲ್:

ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳ ಹೆಜಮಾಡಿ ಟೋಲ್ ಪ್ಲಾಝಾದ ಪರಿಷ್ಕೃತ ದರಗಳು ರೂ. 50 (ಒನ್-ವೇ) ಮತ್ತು ರೂ. 75 (ಅದೇ ದಿನ ಹಿಂತಿರುಗಿದರೆ).ಮಾಸಿಕ ಪಾಸ್ ಒಂದು ತಿಂಗಳಲ್ಲಿ ಗರಿಷ್ಠ 50 ಬಾರಿ 1640 ರೂ.

ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಒಂದು ಮಾರ್ಗದ ದರಗಳು ರೂ. 80 ಮತ್ತು ಅದೇ ದಿನ ಮರಳಿ ಬಂದರೆ ರೂ. 120., ಮಾಸಿಕ ಪಾಸ್ ರೂ. 2655. ಬಸ್‌ಗಳು ಮತ್ತು ಟ್ರಕ್‌ಗಳಿಗೆ ರೂ. 165 ಮತ್ತು ಅದೇ ದಿನ ಮರಳಿ ಬಂದರೆ ರೂ. 250. ಮಾಸಿಕ ಪಾಸ್ ಬೆಲೆ ರೂ 5560.

ಬಹು ಆಕ್ಸಲ್ ಮತ್ತು ಬೃಹತ್ ನಿರ್ಮಾಣ ಯಂತ್ರೋಪಕರಣಗಳನ್ನು ಹೊಂದಿರುವ ಭಾರೀ ವಾಹನಗಳಿಗೆ ಏಕಮುಖ ಸಂಚಾರ ರೂ. 260 ಮತ್ತು ಅದೇ ದಿನ ಮರಳಿ ಬಂದರೆ ರೂ. 390 ವೆಚ್ಚವಾಗುತ್ತದೆ. ಮಾಸಿಕ ಪಾಸ್ ದರ 8720 ರೂ. ಮಿತಿ ಮೀರಿದ ಅಳತೆಯ (ಏಳು ಅಥವಾ ಅದಕ್ಕೂ ಹೆಚ್ಚು ಆಕ್ಸಲ್ ಗಳದ್ದು) ವಾಹನಗಳಿಗೆ ರೂ 320 ಮತ್ತು ದ್ವಿಮುಖ ರೂ 480 ಮತ್ತು ಮಾಸಿಕ ಪಾಸ್ ರೂ 10615 ಆಗಿರುತ್ತದೆ.

ಗುಂಡ್ಮಿ ಟೋಲ್:

ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳ ಗುಂಡ್ಮಿ ಟೋಲ್ ಪ್ಲಾಝಾದ ಏಕಮುಖ ಸಂಚಾರಕ್ಕೆ ರೂ. 60 ಮತ್ತು ರೂ. 85 (ಅದೇ ದಿನ ಹಿಂತಿರುಗಿದರೆ). ಮಾಸಿಕ ಪಾಸ್ ತಿಂಗಳಿಗೆ ಗರಿಷ್ಠ 50 ಬಾರಿ 1930 ರೂ.

ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಏಕಮುಖ ಸಂಚಾರ ದರಗಳು ರೂ. 95 ಮತ್ತು ಅದೇ ದಿನ ಮರಳಿ ಬಂದರೆ ರೂ. 140. ಮಾಸಿಕ ಪಾಸ್ ರೂ. 3120.ಆಗುತ್ತದೆ.

ಬಸ್‌ಗಳು ಮತ್ತು ಟ್ರಕ್‌ಗಳಿಗೆ ಏಕಮುಖ ಸಂಚಾರ ರೂ. 195 ಮತ್ತು ಅದೇ ದಿನ ಮರಳಿ ಬಂದರೆ ರೂ. 295 ಮಾಸಿಕ ಪಾಸ್‌ನ ಬೆಲೆ ರೂ 6540.

ಬಹು ಆಕ್ಸಲ್ ವಾಹನಗಳು ಮತ್ತು ಬೃಹತ್ ನಿರ್ಮಾಣ ಯಂತ್ರೋಪಕರಣಗಳನ್ನು ಹೊಂದಿರುವ ಭಾರೀ ವಾಹನಗಳಿಗೆ ಏಕಮುಖ ಸಂಚಾರ ರೂ. 310 ಮತ್ತು ದ್ವಿಮುಖಕ್ಕೆ ರೂ 460 ವೆಚ್ಚವಾಗುತ್ತದೆ. ಮಾಸಿಕ ಪಾಸ್‌ನ ಬೆಲೆ 10255 ರೂ. ಆಗುತ್ತದೆ.

ಮಿತಿ ಮೀರಿದ ಅಳತೆಯ (ಏಳು ಅಥವಾ ಅದಕ್ಕೂ ಹೆಚ್ಚು ಆಕ್ಸಲ್ ಗಳದ್ದು) ವಾಹನಗಳಿಗೆ ಏಕಮುಖ ಸಂಚಾರ ರೂ. 375 ಮತ್ತು ಅದೇ ದಿನ ಮರಳಿ ಬಂದರೆ 560 ಮತ್ತು ಮಾಸಿಕ ಪಾಸ್ ರೂ. 12485 ಆಗಿರುತ್ತದೆ.

ಇನ್ನು 2023-24ನೇ ಸಾಲಿನ ಅವಧಿಗೆ ಎಲ್ಲಾ ಮೂರು ಟೋಲ್ ಪ್ಲಾಝಾದಿಂದ 20 ಕಿ.ಮೀ ಅಂತರದಲ್ಲಿ ವಾಸಿಸುವ ಸ್ಥಳೀಯ ವಾಣಿಜ್ಯೇತರ ವಾಹನಗಳಿಗೆ ಅನ್ವಯವಾಗುವ ಮಾಸಿಕ ಪಾಸಿನ ದರಗಳು ಪ್ರತಿ ಟೋಲ್ ಪ್ಲಾಝಾಕ್ಕೆ ತಿಂಗಳಿಗೆ 330 ರೂ. ಆಗಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Similar News