ನಟ ಸುದೀಪ್ ಗೆ ಬೆದರಿಕೆ ಪತ್ರ: ಪ್ರಕರಣ ದಾಖಲು
Update: 2023-04-05 04:54 GMT
ಬೆಂಗಳೂರು: ನಟ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಬೆದರಿಕೆ ಪತ್ರದ ಸಮೇತ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಸುದೀಪ್ ಖಾಸಗಿ ವಿಡಿಯೋ ಸೋರಿಕೆ ಮಾಡುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಲ್ಲದೆ, ಕೆಲ ಅವಾಚ್ಯ ಶಬ್ದಗಳನ್ನು ಸಹ ಪತ್ರದಲ್ಲಿ ದುಷ್ಕರ್ಮಿಗಳು ಬರೆದಿದ್ದಾರೆನ್ನಲಾಗಿದೆ.