2017ರ ಭಟ್ಕಳ ಗಲಭೆ| 78 ಹಿಂದೂಗಳ ವಿರುದ್ಧದ ಪ್ರಕರಣ ವಾಪಸ್: ಶಾಸಕ ಸುನಿಲ್ ನಾಯ್ಕ್ ಫೇಸ್ ಬುಕ್ ಪೋಸ್ಟ್
ಭಟ್ಕಳ: ಮೇ16, 2017ರಲ್ಲಿ ಭಟ್ಕಳ ಪುರಸಭೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 78 ಜನ ಹಿಂದೂಗಳ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ ಎಂದು ಭಟ್ಕಳ ಶಾಸಕ ಸುನಿಲ್ ನಾಯ್ಕ್ ತಮ್ಮ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಭಟ್ಕಳ ಪುರಸಭೆಯಲ್ಲಿ ನಡೆದ ಗಲಭೆಯಲ್ಲಿ ಸುಮಾರು 78 ಜನ ಹಿಂದೂಗಳ ಮೇಲೆ ಪೋಲಿಸ್ ಪ್ರಕರಣಗಳು ದಾಖಲಾಗಿದ್ದವು. ಅದನ್ನು ಹಿಂಪಡೆಯುವಂತೆ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಲಾಗಿತ್ತು. ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಎಲ್ಲಾ ಪ್ರಕರಣಗಳನ್ನು ಹಿಂಪಡೆದು ಆದೇಶ ಹೊರಡಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು” ಎಂದು ಸುನಿಲ್ ನಾಯ್ಕ್ ತಮ್ಮ ಫೇಸ್‌ಬುಕ್ ನಲ್ಲಿ ಬರೆದಿದ್ದಾರೆ.
ನಾಮಧಾರಿ ಸಮುದಾಯಕ್ಕೆ ಸೇರಿದ ವರ್ತಕ ರಾಮಚಂದ್ರ ನಾಯ್ಕ ಎಂಬವರು ಪುರಸಭೆ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಉಂಟಾದ ಗಲಭೆ ಸಂಬಧಿಸಿ 78 ಜನರ ಮೇಲೆ ಗಲಭೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಗಳನ್ನು ರದ್ದು ಪಡಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ.
ಸ್ಪಷ್ಟನೆಗಾಗಿ ಶಾಸಕರನ್ನು ಸಂಪರ್ಕಿಸಿದ್ದರಾದರೂ, ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.