ಕುಡಿಯುವ ನೀರಲ್ಲೂ ಕಮಿಷನ್ ದಾಹವೇ?: ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿ

'ವಾರ್ತಾಭಾರತಿ' ವಿಶೇಷ ವರದಿಯನ್ನು ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ

Update: 2023-04-07 17:08 GMT

ಬೆಂಗಳೂರು, ಎ.7: ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಳಪೆ ಕಾಮಗಾರಿ ಬಗೆಗೆ ವಾರ್ತಾಭಾರತಿ ದಿನಪತ್ರಿಕೆಯ ವಿಶೇಷ ವರದಿಯನ್ನು ಆಧರಿಸಿ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಬೊಮ್ಮಾಯಿಯವರೇ, 'ಇದು ಜಲಜೀವನ್ ಮಿಷನ್ ಅಂತಲೋ ಅಥವಾ 40 ಪರ್ಸೆಂಟ್ ಕಮಿಷನ್ ಮಿಷನ್ ಅಂತಲೋ' ಎಂದು ಪ್ರಶ್ನಿಸಿದ್ದಾರೆ.

ಈ ಯೋಜನೆಯಡಿ ಕುಷ್ಟಗಿಯ 90ರಷ್ಟು ನಲ್ಲಿಗಳಲ್ಲಿ ನೀರು ಸರಬರಾಜೇ ಆಗುತ್ತಿಲ್ಲ. ಕುಡಿಯುವ ನೀರಲ್ಲೂ ಕಮಿಷನ್ ದಾಹವೇ. ಇದು ಬಿಜೆಪಿಯ ನೀಚತನದ ಪರಮಾವಧಿ. ಕಮಿಷನ್ ಕೊಟ್ಟರೆ ಜನರು ಉಸಿರಾಡುವ ಗಾಳಿಯನ್ನು ಕೂಡ ಕಲುಷಿತಗೊಳಿಸಿ ಕೊಲ್ಲಲು ಹೇಸದವರಲ್ಲ ನೀವು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಖಾಸಗಿ ಶಾಲೆಗಳ ಹೆಚ್ಚುವರಿ ಶುಲ್ಕದ ಕುರಿತು ವಾರ್ತಾಭಾರತಿ ವರದಿಯನ್ನು ಉಲ್ಲೇಖಿಸಿ ಮಾತನಾಡಿರುವ ಅವರು, ‘ಬೆಲೆಯೇರಿಕೆ, ಹಣದುಬ್ಬರ, ನಿರುದ್ಯೋಗದಿಂದ ಬಸವಳಿದಿರುವ ಜನತೆಗೆ ಶುಲ್ಕ ಹೆಚ್ಚಳದ ಬರೆ ಎಳೆಯುತ್ತಿದ್ದೀರ. ಪಠ್ಯ ಪುಸ್ತಕದ ಶುಲ್ಕ ಹೆಚ್ಚು ಮಾಡಿದಿರಿ. ಈಗ ಖಾಸಗಿ ಶಾಲೆಗಳು 40ರಷ್ಟು ಶುಲ್ಕ ಹೆಚ್ಚಳ ಮಾಡಿದರೂ ಮುಖ್ಯಮಂತ್ರಿ ಬೊಮ್ಮಾಯಿ ಸುಮ್ಮನಿರುವುದು ಯಾಕೆ, ಮೌನವಾಗಿರುವ ಮೂಲಕ ಖಾಸಗಿ ಶಾಲೆಗಳ ಹಗಲು ದರೋಡೆಗೆ ಮುಖ್ಯಮಂತ್ರಿಗಳೇ ಕುಮ್ಮಕ್ಕು ನೀಡುತ್ತಿದ್ದಾರಾ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

Similar News