ಮತದಾರರಿಗೆ ಸೀರೆ ಹಂಚಿಕೆ ಆರೋಪ: ಸಚಿವ ಮುನಿರತ್ನ ವಿರುದ್ಧ ಎಫ್‍ಐಆರ್
Update: 2023-04-10 15:02 GMT
ಬೆಂಗಳೂರು, ಎ.10: ಮತದಾರರಿಗೆ ಬೆಂಬಲಿಗರು ಸೀರೆ ಹಂಚುತ್ತಿದ್ದ ಆರೋಪದಡಿ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಾಗಿದೆ.
ಇತ್ತೀಚೆಗೆ ಆರ್.ಆರ್. ನಗರದ ಬಂಗಾರಪ್ಪ ನಗರದಲ್ಲಿ ಮತದಾರರಿಗೆ ಮುನಿರತ್ನ ಬೆಂಬಲಿಗರು ಸೀರೆ ಹಂಚುವಾಗ ಸಿಕ್ಕಿಬಿದ್ದಿದ್ದರು. ಆನಂತರ ಚುನಾವಣಾ ಆಯೋಗದ ಅಧಿಕಾರಿ ಮನೋಜ್ ಕುಮಾರ್ ನೀಡಿದ ದೂರಿನ ಮೇರೆಗೆ ಸಚಿವ ಮುನಿರತ್ನ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.