ಭಟ್ಕಳ: ಮಟ್ಕಾ ಅಡ್ಡೆ ಮೇಲೆ ದಾಳಿ; ಐವರ ವಿರುದ್ಧ ಪ್ರಕರಣ ದಾಖಲು

Update: 2023-04-11 16:23 GMT

ಭಟ್ಕಳ:  ಮಟ್ಕಾ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಭಟ್ಕಳ ಶಹರ ಠಾಣಾ ಪೊಲಿಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಲ್ಲಿನ ಛಾಯಾ ಹೊಟೆಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಸಂಬಂಧಿಸಿದಂತೆ ತಾಲೂಕಿನ ಕೋಟೇಶ್ವರ ರೋಡ್ ನಿವಾಸಿ ಪ್ರವೀಣ ರಾಜೇಂದ್ರ ಹೊನ್ನಾವರಕರ (32) ಹಾಗೂ ಮುಟ್ಟಳ್ಳಿ ತಲಾಂದನ ನಾಗರಾಜ ದುರ್ಗಪ್ಪ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 5225 ರೂ. ನಗದು ಹಾಗೂ ಸೊತ್ತು ವಶಪಡಿಸಿಕೊಂಡಿದ್ದಾರೆ.

ಇನ್ನೊಂದು  ಮಟ್ಕಾ ಆಡ್ಡೆಯ ಮೇಲಿನ ಪೊಲೀಸ್ ದಾಳಿ ಪ್ರಕರಣದಲ್ಲಿ ಮುಟ್ಟಳ್ಳಿ, ತಲಾಂದ ನಿವಾಸಿ ಜಗದೀಶ ಶನಿಯಾರ ನಾಯ್ಕ ಹಾಗೂ ಮುಟ್ಟಳ್ಳಿ ತಲಾಂದನ ನಾಗರಾಜ ದುರ್ಗಪ್ಪ ನಾಯ್ಕ ಎಂಬವರು ಆರೋಪಿಗಳು ಎಮದು ಗುರುತಿಸಲಾಗಿದ್ದು,  5225 ರೂ. ನಗದು ಹಾಗೂ ಸೊತ್ತು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಮಂಜುನಾಥ ಹೊಟೇಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೋಟೇಶ್ವರ ರೋಡ್ ನಿವಾಸಿ ಸಂತೋಷ ನಾರಾಯಣ ಭಟ್ಕಳಕರ (46) ಮತ್ತು ಜಾಲಿ ತಲಗೇರಿಯ ನಾಗರಾಜ ವೆಂಕಟಪ್ಪ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಿಂದ ನಗದು ಹಾಗು ಸೊತ್ತು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Similar News