ಬಿಎಸ್ ವೈ ಸಂಬಂಧಿ ಎನ್ ಆರ್ ಸಂತೋಷ್ ಜೆಡಿಎಸ್ ಗೆ ಸೇರ್ಪಡೆ

ಅರಸೀಕೆರೆಯಿಂದ ಸ್ಪರ್ಧೆ ಸಾಧ್ಯತೆ

Update: 2023-04-15 08:06 GMT

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ ಎನ್.​ಆರ್. ​ಸಂತೋಷ್​ ಬಿಜೆಪಿ ತೊರೆದು ಶನಿವಾರ ಜೆಡಿಎಸ್ ಸೇರ್ಪಡೆಯಾದರು. 

ಜೆಡಿಎಸ್ ವರಿಷ್ಠ ದೇವೇಗೌಡ ಅವರ ನಿವಾಸದಲ್ಲಿ ಪಕ್ಷದ ಶಾಲು ಹೊದಿಸಿ ಎನ್ ಆರ್ ಸಂತೋಷ್ ಅವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪಕ್ಷಕ್ಕೆ ಬರಮಾಡಿಕೊಂಡರು. 

ಅರಸೀಕೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಂತೋಷ್ ಬೆಂಬಲಿಗರು ಬಿಜೆಪಿ  ಪಕ್ಷದ ಬಾವುಟಕ್ಕೆ ಬೆಂಕಿ ಹಚ್ಚಿ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದರು. 

ಇನ್ನು ಅರಸೀಕೆರೆ ಕ್ಷೇತ್ರದ ಘೋಷಿತ ಅಭ್ಯರ್ಥಿಯಾಗಿರುವ ಅಶೋಕ್​ ಅವರ ಮನವೊಲಿಸಿ ಸಂತೋಷ್​ಗೆ ಟಿಕೆಟ್​ ನೀಡುವ ಬಗ್ಗೆ  ನಡೆಯುತ್ತಿದೆ ಎನ್ನಲಾಗುತ್ತಿದೆ. 

Similar News