ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಪುತ್ರಿ, ಮೊಮ್ಮಗ
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಇವರ ಪುತ್ರಿ, ಮೊಮ್ಮಗ ಮತ್ತು ಬೆಂಬಲಿಗರು ಇಂದು ಬಿಜೆಪಿ ಸೇರಿದರು.
ನಗರದ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಸೇರ್ಪಡೆಯಾದ ಎಂ.ಪಿ. ಪ್ರಕಾಶ್ ಪುತ್ರಿ ಎಂ.ಪಿ. ಸುಮಾ ವಿಜಯ, ಮೊಮ್ಮಗ ಸಾತ್ವಿಕ್ ವಿಜಯಕುಮಾರ್ ಹಿರೇಮಠ, ಅಳಿಯ ವಿಜಯಕುಮಾರ್ ಬಸವಣ್ಣಯ್ಯ ಹಿರೇಮಠರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.
ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ರಾಜ್ಯ ವಕ್ತಾರರು ಮತ್ತು ವಿಧಾನಪರಿಷತ್ ಸದಸ್ಯೆ ಡಾ. ತೇಜಸ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಈ ಸಂದರ್ಭದಲ್ಲಿ ಇದ್ದರು.
ಇವರಲ್ಲದೇ, ಪುರಸಭೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಹಣ್ಣಿ ವೀರಮ್ಮ, ಶ್ರೀಮತಿ ಪವಿತ್ರಾ ರಾಮಸ್ವಾಮಿ, ಯಮುನಪ್ಪ, ಕೋಡಿಹಳ್ಳಿ ಕೊಟ್ರೇಶ್, ಪುರಸಭೆ ಮಾಜಿ ಸದಸ್ಯ ರಾಮಸ್ವಾಮಿ ಚೈತನ್ಯ, ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ಸದಸ್ಯ ಎಸ್. ಯಮುನೂರಪ್ಪ, ಗ್ರಾಮ ಪಂಚಾಯತಿ ಸದಸ್ಯ ಬಿ.ಎಂ. ಅಭಿಷೇಕ್, ಮುಖಂಡರಾದ ಸುದರ್ಶನ ಶಿಲ್ಪಿ, ಹನುಮಂತು, ಸುರೇಶ್ ಕಾಯಣ್ಣನವರ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕಿರಣ್ ಕುಮಾರ್ ಲಿಂಗದಹಳ್ಳಿ, ಪತ್ರಕರ್ತೆ ಶ್ರೀಮತಿ ಎಂ.ಪಿ.ಅರುಣ ಮತ್ತು ಸಮಾಜಸೇವಕಿ ಶ್ರೀಮತಿ ಗೀತಾ ದೇಸಾಯಿ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.