ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಚೆನ್ನೈನಿಂದ ಬಂತು ಬಂಗಾಳದ ಬಿಳಿ ಹುಲಿ!

Update: 2023-04-24 14:11 GMT

ಬೆಂಗಳೂರು, ಎ.24: ದಿಲ್ಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮೋದಿಸಲಾದ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಎ.21ರಂದು ಅರಿಗ್ನಾರ್ ಅಣ್ಣಾ ಝೂಲಾಜಿಕಲ್ ಪಾರ್ಕ್, ವಂಡಲೂರ್, ಚೆನ್ನೈ ಇಂದ ಗಂಡು ಬಿಳಿ ರಾಯಲ್ ಬಂಗಾಳ ಹುಲಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನ ಮೃಗಾಲಯಕ್ಕೆ ತರಲಾಯಿತು.

2020ರಲ್ಲಿ ಸನಾ ಮತ್ತು ಶಂಕರ್ ಸಿಂಹಗಳಿಗೆ ಜನಿಸಿದ ಗಂಡು ಸಿಂಹ ಶೇರ್ಯಾರ್ ಅನ್ನು ವಂಡಲೂರು ಮೃಗಾಲಯಕ್ಕೆ ಸ್ಥಳಾಂತರಿಸಿ, ವಂಡಲೂರು ಮೃಗಾಲಯದ ಭೀಷ್ಮ ಮತ್ತು ಮೀನಾಗೆ ಜನಿಸಿರುವ ಸುಮಾರು 3 ವರ್ಷ ವಯಸ್ಸಿನ ಈ ಬಿಳಿ ಹುಲಿಯನ್ನು ತರಲಾಯಿತು.

ನಗರದ ಹವಾಮಾನಕ್ಕೆ ಹೊಂದಿಕೊಳ್ಳಲು ಈ ಹೊಸ ನಿವಾಸಿಯನ್ನು ಕೆಲವು ದಿನಗಳವರೆಗೆ ಕ್ವಾರಂಟೈನ್ ಪ್ರದೇಶದಲ್ಲಿ ಇರಿಸಲಾಗಿದೆ ಮತ್ತು ನಿರಂತರ ವೀಕ್ಷಣೆಯಲ್ಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News