ಬೇಕರಿ ಮಾಲಕಿ ಮೇಲೆ ಹಲ್ಲೆ: ಆರೋಪ

Update: 2023-04-25 15:33 GMT

ಬೆಂಗಳೂರು, ಎ.25: ಬೇಕರಿ ಮಾಲಕಿಯ ಮೇಲೆ ದುಷ್ಕರ್ಮಿಗಳು  ಹಲ್ಲೆ ಮಾಡಿ ದಾಂದಲೆ ನಡೆಸಿರುವ ಘಟನೆ ನಿನ್ನೆ ಸಂಜೆ ಲಿಂಗರಾಜಪುರದಲ್ಲಿ ನಡೆದಿದೆ.

ಲಿಂಗರಾಜಪುರದಲ್ಲಿ ಮಹಿಳೆಯೊಬ್ಬರು ಬೇಕರಿ ವ್ಯಾಪಾರ ನಡೆಸುತ್ತಿದ್ದು, ನಿನ್ನೆ ಸಂಜೆ ಮೂವರು ದುಷ್ಕರ್ಮಿಗಳು ಬೇಕರಿ ಬಳಿ ಬಂದಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಜತೆ ಜಗಳ ತೆಗೆದ ಪುಂಡರು, ನೋಡ ನೋಡುತ್ತಿದ್ದಂತೆ ಬೇಕರಿಯಲ್ಲಿದ್ದ ತಿನಿಸುಗಳನ್ನ ರಸ್ತೆಗೆ ಬಿಸಾಡಿ ದಾಂಧಲೆ ನಡೆಸಿದ್ದಾರೆ. 

ಘಟನೆ ಸಂಬಂಧ ಬಾಣಸವಾಡಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Similar News