ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಮಗು ಚರಂಡಿಯಲ್ಲಿ ಬಿದ್ದು ಮೃತ್ಯು

Update: 2023-04-30 12:24 GMT

ಬೆಂಗಳೂರು, ಎ.30: 11 ತಿಂಗಳ ಮಗು ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ರ್ದುಘಟನೆ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ನಿಡವಂದ ಕಾಲೋನಿಯಲ್ಲಿ ನಡೆದಿದೆ. 

ಬಿಹಾರದ ಬಕ್ಸಾರ್ ಜಿಲ್ಲೆಯ ನೋನ್ ಪುರ ಗ್ರಾಮದ ಉಮೇಶ್ ಸಿಂಗ್, ಅನಿತಾ ದೇವಿ ದಂಪತಿಯ 11 ತಿಂಗಳ ರಾಜ್ ಕುಮಾರ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.

ರವಿವಾರ ಬೆಳಗ್ಗೆ ನಿಡವಂದ ಕಾಲೋನಿಯ ಮನೆಯ ಅಂಗಳದಲ್ಲಿ ಮಗು ಆಟವಾಡಿ ಮನೆಯ ಮುಂದೆ ನಿಂತಿದ್ದ ಕ್ಯಾಂಟರ್ ಕೆಳಗೆ ನುಸುಳಿ ಹೋಗಿದೆ. ಆದರೆ ಅಲ್ಲೇ ಸುಮಾರು 4 ಅಡಿಯ ಚರಂಡಿಯು ತೆರೆದಿದ್ದು, ಮಗು ಬಿದ್ದು ಸಾವನ್ನಪ್ಪಿದೆ. ಸ್ಥಳೀಯ ಆಡಳಿತದಿಂದ ಚರಂಡಿ ನಿರ್ವಹಣೆ ಸೂಕ್ತವಾಗಿರದ ಹಿನ್ನೆಲೆಯಲ್ಲಿ, ಈ ಘಟನೆ ಸಂಭವಿಸಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಸಂಬಂಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Similar News