ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಸ್ಕೂಟರ್ ಏರಿ ರಾಹುಲ್ ಗಾಂಧಿ ಸಂಚಾರ

Update: 2023-05-07 13:29 GMT

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ರಾಜಧಾನಿಗೆ ಬಂದಿರುವ ರಾಹುಲ್ ಗಾಂಧಿ ಅವರು ಸ್ಕೂಟರ್ ಏರಿ ಹೊರಟಿರುವುದು ಗಮನ ಸೆಳೆದಿದೆ. 

ರಾಹುಲ್ ಗಾಂಧಿ ಅವರು ತಮ್ಮ ಹೋಟೆಲ್‌ಗೆ ತಲುಪಲು ಡೆಲಿವರಿ ಬಾಯ್‌ನ ಸ್ಕೂಟರ್‌ನಲ್ಲಿ ಹಿಂಬದಿ ಸವಾರರಾಗಿ ಪ್ರಯಾಣ ಬೆಳೆಸಿದ್ದಾರೆ.

ರಾಹುಲ್ ಗಾಂಧಿ ಬೆಂಗಳೂರಿನ ಏರ್ಲೈನ್ಸ್ ಹೋಟೆಲ್​ಗೆ ಬಂದಿದ್ದ ವೇಳೆ ಡೆಲಿವರಿ ಬಾಯ್ ಓರ್ವ ಸ್ಕೂಟರ್‌ನಲ್ಲಿ ಬಂದಿದ್ದರು. ಈ ವೇಳೆ ರಾಹುಲ್ ಗಾಂಧಿ  ಡೆಲಿವರಿ ಬಾಯ್ ಜೊತೆ ಸ್ಕೂಟರ್‌ ನಲ್ಲಿ ಸಂಚಾರ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಬೃಹತ್ ರೋಡ್ ಶೋ ಹಮ್ಮಿಕೊಂಡಿದ್ದು, ರೋಡ್ ಶೋಗೂ ಮುನ್ನ ಸ್ಕೂಟರ್ ಏರಿ ಗಮನ ಸೆಳೆದಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ.

Similar News